Monday, August 15, 2022

Latest Posts

25 ವರ್ಷ ದಾಟುವುದರೊಳಗೇ ಬಿಳಿ ಕೂದಲಾಗಿದೆಯೇ? ಬಿಳಿ ಕೂದಲು ನಿವಾರಣೆಗೆ ವಾರದಲ್ಲಿ ಎರಡು ಸಲ ಇದನ್ನು ಹಚ್ಚಿಕೊಳ್ಳಿ!

10 ವರ್ಷದ ಮಕ್ಕಳಿಗೂ ಬಿಳಿ ಕೂದಲು ಸಮಸ್ಯೆ ಪ್ರಾರಂಭವಾಗಿದೆ. ಈಗಿನ ಆಹಾರ ಪದ್ಧತಿ, ಮೊಬೈಲ್, ಕಂಪ್ಯೂಟರ್ ಬಳಕೆ ಹೆಚ್ಚಾಗಿರುವುದರಿಂದ ಬಿಳಿ ಕೂದಲು ಹೆಚ್ಚುತ್ತಿದೆ. ತುಂಬಾ ಜನ ಬಿಳಿ ಕೂದಲು ಆಗಿದೆ ಎಂದು ಕಲರ್ ಹಾಕಿಸುತ್ತಾರೆ. ಹಾಗೆ ಮಾಡಿದರೆ ಕಣ್ಣಿಗೆ ತೊಂದರೆಯಾಗುತ್ತದೆ.  ಬಿಳಿ ಕೂದಲು ನಿವಾರಣೆಗೆ ಮನೆಯಲ್ಲಿಯೇ ಪರಿಹಾರವಿದೆ. ಈ ಕೆಳಗೆ ನಾನು ಹೇಳಿರುವುದನ್ನು ವಾರದಲ್ಲಿ ಎರಡು ಸಲಿ ಹಚ್ಚಿಕೊಳ್ಳಿ. ಬಿಳಿ ಕೂದಲು ಆಗದಂತೆ ತಡೆಯುತ್ತದೆ ಮತ್ತು ಬಿಳಿ ಕೂದಲು ಆಗಿದ್ದರೂ ನಿಧಾನವಾಗಿ ಕಪ್ಪು ಕೂದಲಾಗುತ್ತದೆ.

ಬೇಕಾಗುವ ಸಾಮಗ್ರಿ:

ದಾಸವಾಳದ ಸೊಪ್ಪು. ಹೂವು
ಆಲೂವೇರಾ
ಒಂದೆಲಗ( ಬ್ರಾಹ್ಮಿ)
ಕಾಯಿ ತುರಿ
ಮದರಂಗಿ ಸೊಪ್ಪು
ನೆಲ್ಲಿ ಕಾಯಿ
ಎಳ್ಳೆಣ್ಣೆ

ಮಾಡುವ ವಿಧಾನ:

ಮೊದಲಿಗೆ 15 ದಾಸವಾಳದ ಎಲೆ, 5 ದಾಸವಾಳದ ಹೂವನ್ನು ತೆಗೆದುಕೊಳ್ಳಿ. ಅದನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಅದಕ್ಕೆ ಒಂದು ಉದ್ದದ ಆಲೂವೇರಾ, 15 ಮದರಂಗಿ ಎಲೆ, ಅರ್ಧ ಕಪ್ ಕಾಯಿತುರಿ, 10 ಒಂದೆಲಗ, 5 ನೆಲ್ಲಿಕಾಯಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ನಂತರ 5 ಚಮಚ ಎಳ್ಳೆಣ್ಣೆ ಹಾಕಿ ಮಿಕ್ಸ್ ಮಾಡಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಇದನ್ನು ಹಚ್ಚಿಕೊಂಡು 2 ತಾಸು ಬಿಡಿ. ನಂತರ ತಲೆ ಸ್ನಾನ ಮಾಡಿ. ಹೀಗೆ ವಾರದಲ್ಲಿ ಎರಡು ಸಲಿ ಮಾಡಿ ಬಿಳಿ ಕೂದಲು ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss