Thursday, August 11, 2022

Latest Posts

25 ಕೋಟಿ ರೂ. ವಂಚನೆ ಪ್ರಕರಣ: ಇತಿಶ್ರೀ ಹಾಡಿದ ನಟ ದರ್ಶನ್​

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಸಂಚಲನ ಮೂಡಿಸಿದ ನಟ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಇದೀಗ ಇತಿಶ್ರೀ ಕಂಡಿದ್ದು, ಸ್ವತಃ ನಟ ದರ್ಶನ್​ ಅವರೇ ಈ ಪ್ರಕರಣಕ್ಕೆ ಮಂಗಳ ಹಾಡಿರೋದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಹರ್ಷ ಹಾಗೂ ಉಮಾಪತಿ ಇಬ್ಬರೂ ನನ್ನ ಸ್ನೇಹಿತರು. ಉಮಾಪತಿ ಈಗಲೂ ನಮ್ಮ ನಿರ್ಮಾಪಕರೇ. ನಾನು ಉಮಾಪತಿ ಬಗ್ಗೆ ಏನನ್ನೂ ಹೇಳಲಾರೆ. ಅವರ ಜೊತೆ ಕರೆಯಲ್ಲಿ ನಾನು ಮಾತನಾಡುತ್ತಲೇ ಇದ್ದೇನೆ. ನಾಳೆ ನನ್ನನ್ನ ಭೇಟಿಯಾಗಿ ಅಂತಲೂ ಉಮಾಪತಿಗೆ ಹೇಳಿದ್ದೇನೆ. ಇದು ನಿಲ್ಲುವಂತಹ ಕೇಸ್​ ಕೂಡ ಅಲ್ಲ. ಯಾರೂ ಅರೆಸ್ಟ್​ ಕೂಡ ಆಗೋದಿಲ್ಲ. ಇದೇನು ಮಕ್ಕಳಾಟವೂ ಅಲ್ಲ, ದೊಡ್ಡ ವಿಷಯವೂ ಅಲ್ಲ. ಚಾಕಲೇಟ್​ಗಾಗಿ ಕಿತ್ತಾಡೋಕೆ ನಾವೇನು ಚಿಕ್ಕ ಮಕ್ಕಳಲ್ಲ ಎಂದು ಹೇಳಿದರು.
ಇನ್ನು ಬೆಳಗ್ಗೆ ಅರುಣಾ ಬಿಡುಗಡೆ ಮಾಡಿದ್ದು, ಈ ಕುರಿತು ಮಾತನಾಡಿದ ನಟ ದರ್ಶನ್​, ಅರುಣಾ ಕುಮಾರಿಯನ್ನ ಉಮಾಪತಿ ಏಕೆ ಬಳಸಿಕೊಂಡರು ಅನ್ನೋದು ನನಗೆ ಗೊತ್ತಿಲ್ಲ. ಆಧಾರ್​ ಕಾರ್ಡ್​ ಫೋಟೊ ಕಳಿಸಿ ಎಂದರು. ನಾನು ಕಳುಹಿಸಿದೆ. ಅವರಿಬ್ಬರ ನಡುವೆ ಏನಿತ್ತು ಅನ್ನೋದು ನನಗೆ ಗೊತ್ತಿಲ್ಲ. ಈಗ ಬಾಲ್​ ಉಮಾಪತಿ ಅಂಗಳದಲ್ಲಿ ಇದೆ. ಅವರು ಏನು ಮಾಡ್ತಾರೆ ಅನ್ನೋದು ಅವರಿಗೆ ಬಿಟ್ಟಿದ್ದು ಅಂತಾ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss