Wednesday, August 10, 2022

Latest Posts

25 ಕೋಟಿ ರೂ. ವಂಚನೆ ಪ್ರಕರಣ: ನಮಗೆ ದರ್ಶನ್​​ ಮುಖ್ಯ ಎಂದ ನಿರ್ಮಾಪಕ ಉಮಾಪತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಇದೀಗ ಅಂತ್ಯ ಕಂಡಿದ್ದು, ಈ ಕುರಿತು ಸ್ವತಃ ನಟ ದರ್ಶನ್​​ ನಾವೆಲ್ಲ ಸಾಯುವವರೆಗೂ ಗೆಳೆಯರೇ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
ಈ ಕುರಿತು ಮಾತನಾಡಿದ ನಿರ್ಮಾಪಕ ಉಮಾಪತಿ, ದರ್ಶನ್​ ಅವರೇ ಈ ಪ್ರಕರಣ ಮುಗಿಸೋಣ ಎಂದು ಹೇಳಿದ ಮೇಲೆ ನಾನು ಮತ್ತೆ ಈ ವಿಚಾರವಾಗಿ ಮಾತನಾಡೋದಿಲ್ಲ. ನಾನು ಈ ಪ್ರಕರಣದಲ್ಲಿ ಕಾನೂನು ರೀತಿಯ ಹೋರಾಟಕ್ಕೆ ಇಳಿಯೋಕೆ ದರ್ಶನ್​ರೇ ಕಾರಣ. ನಾನು ಅವರಿಗಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೆ. ಇದೀಗ ದರ್ಶನ್​​​ ಪ್ರಕರಣ ಅಂತ್ಯ ಮಾಡೋಣ ಎಂದ ಮೇಲೆ ನಾನು ಸಾಧಿಸಬೇಕಾದದ್ದು ಏನೂ ಬಾಕಿ ಉಳಿದಿಲ್ಲ ಎಂದು ಹೇಳಿದರು.
ದರ್ಶನ್​ ನನಗೆ ಕರೆ ಮಾಡಿ ಈ ಪ್ರಕರಣ ಅಂತ್ಯ ಮಾಡೋಣ ಎಂದು ಹೇಳಿದರು, ನೀವು ಎಂದಿಗೂ ನಮ್ಮ ನಿರ್ಮಾಪಕರೇ ಅಂದರು. ಹೀಗಾಗಿ ನಾನು ಕೂಡ ಈ ಪ್ರಕರಣದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಹಾಗೂ ದರ್ಶನ್​ ನಡುವಿನ ಸಂಬಂಧ ಈ ವ್ಯವಹಾರಗಳನ್ನ ಮೀರಿದ್ದು. ಹರ್ಷ ಕೂಡ ದರ್ಶನ್​ಗಾಗಿ ಫೈಟ್​ ಮಾಡುತ್ತಿದ್ದರು. ನಾನೂ ಸಹ ದರ್ಶನ್​ಗಾಗಿಯೇ ಫೈಟ್​ ಮಾಡುತ್ತಿದ್ದೆ. ನಮಗೆ ದರ್ಶನ್​​ ಅವರು ಮುಖ್ಯ. ಉಳಿದವರ ಬಗ್ಗೆ ನಾವು ತಲೆಕೆಡಿಸಿಕೊಳ್ಳೋದಿಲ್ಲ. ದರ್ಶನ್​ ಅವರ ಹೆಸರು ಇರೋದಕ್ಕೆ ಈ ಪ್ರಕರಣ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ಇಲ್ಲವಾಗಿದ್ರೆ ಇದು ಬೆಳಕಿಗೆ ಬರ್ತಾನೇ ಇರಲಿಲ್ಲ ಎಂದು ಹೇಳಿದರು.
ಇನ್ನು ಇದೇ ವೇಳೆ ಅರುಣಾ ಕುಮಾರಿ ಬಗ್ಗೆಯೂ ಮಾತನಾಡಿದ ಅವರು ಆಕೆಯ ಬಗ್ಗೆ ನಾನು ಏನನ್ನೂ ಮಾತನಾಡಲು ಬಯಸೋದಿಲ್ಲ. ಆಕೆಗೂ ನನಗೂ ಯಾವುದೇ ಸಂಬಂಧ ಇಲ್ಲ. ದರ್ಶನ್​ ಹೇಳಿದ್ದಾರೆ ಹಾಗಾಗಿ ಈ ಪ್ರಕರಣಕ್ಕೆ ಅಂತ್ಯ ಹಾಡುತ್ತಿದ್ದೇವೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss