ಗುಜರಾತ್ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಲಿರುವ ಪಾಕಿಸ್ತಾನಿ ನಿರಾಶ್ರಿತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ನಿರಾಶ್ರಿತರು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಕೆಲವೇ ವರ್ಷಗಳಲ್ಲಿ 500ಕ್ಕೂ ಹೆಚ್ಚು ನಾಗರಿಕರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಹಿಂದೂಗಳು ಎಂಬುದು ಗಮನಾರ್ಹ.

ಪಾಕಿಸ್ತಾನದ ಪೌರತ್ವವನ್ನು ಹೊಂದಿದ್ದು, ಪ್ರಸ್ತುತ ಭಾರತದಲ್ಲಿ ನಿರಾಶ್ರಿತರಾಗಿದ್ದಾರೆ. ಅವರಲ್ಲಿ ಅರ್ಧದಷ್ಟು ಜನರಿಗೆ ಇತ್ತೀಚೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಭಾರತೀಯ ಪೌರತ್ವ ನೀಡಿದ್ದರು. ದೇಶದ ಪೌರತ್ವದೊಂದಿಗೆ ಅವರಿಗೆ ಮತದಾನದ ಹಕ್ಕು ಕೂಡ ಸಿಕ್ಕಿದೆ. ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ಈ ಜನರು ಮತ ಚಲಾಯಿಸುತ್ತಿರುವುದು ಇದೇ ಮೊದಲು. ಪಾಕಿಸ್ತಾನದಿಂದ ದೇಶಕ್ಕೆ ವಲಸೆ ಬಂದ ನಾಗರಿಕರು ಇಲ್ಲಿನ ರಾಜ್‌ಕೋಟ್‌ನಲ್ಲಿ ನೆಲೆಸಿದ್ದಾರೆ. ಅವರಲ್ಲಿ ಹಲವರು 16 ವರ್ಷಗಳ ಹಿಂದೆ ವಲಸೆ ಬಂದಿರುವವರೂ ಇದ್ದಾರೆ ಅಂದಿನಿಂದ ಅವರು ಭಾರತ ದೇಶದ ಪೌರತ್ವಕ್ಕಾಗಿ ಕಾಯುತ್ತಿದ್ದಾರೆ.

ಪೌರತ್ವ ನೀಡಿದರೆ ಆಧಾರ್ ಕಾರ್ಡ್ ಮತ್ತು ಇತರ ದೇಶೀಯ ದಾಖಲೆಗಳನ್ನು ಸಹ ನೀಡಲಾಗುತ್ತದೆ. ಪ್ರಸ್ತುತ ವಲಸಿಗರೆಲ್ಲರೂ ಬಾಡಿಗೆ ಮನೆಗಳಲ್ಲಿ ಉಳಿದುಕೊಂಡು ವಿವಿಧ ಸಂಸ್ಥೆಗಳಲ್ಲಿ ಖಾಸಗಿ ಉದ್ಯೋಗ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!