ಮಂತ್ರಾಲಯ ಮಠದಲ್ಲಿ ಉರುಳಿ ಬಿದ್ದ 250 ವರ್ಷಗಳ ಹಳೆಯ ಮರ: ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಾಂಗಣದಲ್ಲೇ ಇದ್ದ 250 ವರ್ಷಗಳ ಇತಿಹಾಸದ ದೊಡ್ಡ ಜಮ್ಮಿ ಮರವೊಂದು ಉರುಳಿಬಿದ್ದಿದ್ದು, ಅದೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ.
ಆವರಣದಲ್ಲಿ ಭಕ್ತರಿಲ್ಲದ ವೇಳೆ ಮರ ಬಿದ್ದಿದ್ದರ ಪರಿಣಾಮ ಶ್ರೀಮಠದ ಅಧಿಕಾರಿಗಳು ಹಾಗೂ ಭಕ್ತರು ನಿರಾಳರಾಗಿದ್ದಾರೆ.
ತಲೆಮಾರುಗಳಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳು ಉರುಳಿ ಬಿದ್ದ ಈ ಮಹಾವೃಕ್ಷಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದರು.ರಾಯರ ಭಕ್ತರು ಶ್ರೀ ರಾಘವೇಂದ್ರಸ್ವಾಮಿಯ ದರ್ಶನ ಪಡೆದು ಉರುಳಿ ಬಿದ್ದ ಜಮ್ಮಿಚೇತುವಿಗೆ ಪೂಜೆ ಸಲ್ಲಿಸುತ್ತಿದ್ದುದು ವಾಡಿಕೆಯಾಗಿತ್ತು.
ನಂತರ ಮಂತ್ರಾಲಯದ ಸಿಬ್ಬಂದಿ ಹಾಗೂ ಭಕ್ತರು ಸೇರಿ ಈ ಮರವನ್ನು ತೆರವುಗೊಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!