ಗುಜರಾತಿನ ಕಾಂಡ್ಲಾ ಬಂದರಿನಲ್ಲಿ 2,500 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗುಜರಾತಿನ ಕಚ್​ನ ಕಾಂಡ್ಲಾ ಬಂದರಿನಲ್ಲಿ 2,500 ಕೋಟಿ ರೂ. ಮೌಲ್ಯದ ಹೆರಾಯಿನ್​ ಅನ್ನು ಎಟಿಎಸ್​ ಮತ್ತು ಡಿಆರ್​ಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಒಟ್ಟು ಪ್ರಮಾಣ 250 ಕಿಲೋ ಗ್ರಾಂ ಆಗಿದೆ. ಇದರ ಜೊತೆಗೆ ಅಫ್ಘಾನಿಸ್ತಾನದ ಕಂಟೈನರ್​​ ಸಹ ಸೀಜ್ ಮಾಡಿದ್ದಾರೆ.ಇನ್ನು ಇವುಗಳು ಅಫ್ಘಾನಿಸ್ತಾನದಿಂದ ಆಮದಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಕಳೆದ ವರ್ಷವೂ ಕೂಡ 21,000 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದರ ಜೊತೆಗೆ ಗಾಂಜಾ, ರಕ್ತ ಚಂದನ, ವಿದೇಶಿ ಸಿಗರೇಟ್​, ಅರೆಕಾ ಕಾಫಿ ಬೀಜ ಜಪ್ತಿ ಮಾಡಲಾಗಿತ್ತು.
ಕಳೆದ ಕೆಲ ತಿಂಗಳಿಂದ ಗುಜರಾತ್​ನ ಕಚ್​​​ನಲ್ಲಿ ಮಾದಕ ವಸ್ತು ಕಳ್ಳಸಾಗಣೆ ಘಟನೆ ಹೆಚ್ಚಾಗುತ್ತಿದ್ದು ಬಿಎಸ್​ಎಫ್​, ಗುಜರಾತ್​ ಪೊಲೀಸ್​, ಕೋಸ್ಟ್​ ಗಾರ್ಡ್ ಮತ್ತು ಕಸ್ಟಮ್ಸ್​​ ಅಧಿಕಾರಿಗಳು ಮೇಲಿಂದ ಮೇಲೆ ದಾಳಿ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!