Friday, August 19, 2022

Latest Posts

26/11 ಮುಂಬೈ ದಾಳಿಯ ರೂವಾರಿ ಪಾತಕಿ ಲಖ್ವಿಗೆ 15 ವರ್ಷ ಜೈಲುಶಿಕ್ಷೆ

ಹೊಸ ದಿಗಂತ ಆನ್ ಡೆಸ್ಕ್:

26/11 ಮುಂಬೈ ದಾಳಿಯ ರೂವಾರಿ ಹಾಗೂ ಲಷ್ಕರ್​- ಇ -ತೊಯ್ಬಾ (ಎಲ್‌ಇಟಿ) ಕಮಾಂಡರ್ ಜಾಕಿ-ಉರ್-ರೆಹಮಾನ್ ಲಖ್ವಿಗೆ ಪಾಕಿಸ್ತಾನ್ ಕೋರ್ಟ್​ 15 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಈತ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿರುವ ಆರೋಪದ ಮೇಲೆ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ವಿಭಾಗ (CTD) ಕಳೆದ ಕೆಲ ದಿನಗಳ ಹಿಂದೆ ಅರೆಸ್ಟ್ ಮಾಡಿತ್ತು.
ಈ ಹಿಂದೆ ಮುಂಬೈ ದಾಳಿ ಪ್ರಕರಣದಲ್ಲಿ ಬಂಧಿಯಾಗಿದ್ದ ಲಖ್ವಿ, 2015 ರಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದನು.ಈತ 2008ರ ನವೆಂಬರ್​ 26 ರಂದು ಲಷ್ಕರ್​- ಇ -ತೊಯ್ಬಾದ 10 ಮಂದಿ ಉಗ್ರರು ಮುಂಬೈನ 12 ಕಡೆ ದಾಳಿ ನಡೆಸಿದ್ದನು.
ಜಾಕಿ-ಉರ್-ರೆಹಮಾನ್ ಲಖ್ವಿ ಬಂಧನ ಮಾಡಿದ್ದ ಪಂಜಾಬ್​ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ವಿಭಾಗ ಇಂದು ಪಾಕಿಸ್ತಾನ್ ಕೋರ್ಟ್​ ಮುಂದೆ ಹಾಜರು ಪಡಿಸಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!