ಹೊಸದಿಗಂತ ಆನ್ ಲೈನ್ ಡೆಸ್ಕ್:
ಮುಂಬೈ ಮೇಲೆ ನಡೆದ 26/11 ಭಯಾನಕ ದಾಳಿಗೆ 12 ವರ್ಷ ತುಂಬಿದ ಸಂದರ್ಭ ಇಂದು ಖ್ಯಾತ ಉದ್ಯಮಿ ರತನ್ ಟಾಟಾ ಅವರು ಭಾವನಾತ್ಮಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.
— Ratan N. Tata (@RNTata2000) November 26, 2020
ಮುಂಬೈ ಮೇಲೆ 12 ವರ್ಷಗಳ ಹಿಂದೆ ನರಹಂತಕ ವಿಧ್ವಂಸಕ ಕೃತ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ… ಆದರೆ ಇಲ್ಲಿ ಸ್ಮರಿಸಿಕೊಳ್ಳಬೇಕಾದ ಒಂದು ಸಂಗತಿ ಎಂದರೆ ಜನರು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂಬೈ ಭಯೋತ್ಪಾದನೆ ಮತ್ತು ವಿಧ್ವಂಸಕತೆಯನ್ನು ಮಣಿಸಿದ್ದು. ಈ ದಾಳಿಯಲ್ಲಿ ನಾವು ನಾವು ಕಳೆದುಕೊಂಡವರ ಬಗ್ಗೆ ಶೋಕ ವ್ಯಕ್ತಪಡಿಸುತ್ತೇವೆ ಹಾಗೆಯೇ ವಿಧ್ವಂಸಕರನ್ನು ಮಣಿಸಲು ಸಹಾಯ ಮಾಡಿದ ಯೋಧರ ತ್ಯಾಗವನ್ನು ಗೌರವಿಸುತ್ತೇವೆ ಎಂದು ಬರೆದುಕೊಂಡಿರುವ ಅವರು, ನಾವು ಹೆಚ್ಚು ಶ್ಲಾಘಿಸಬೇಕಿರುವುದು ನಾವು ಪಾಲಿಸಿಕೊಂಡು ಬಂದ ಏಕತೆ ಮತ್ತು ಕರುಣೆಯ ಮನೋಭಾವ ಹಾಗೂ ಸಂವೇದನಾಶೀಲತೆಯನ್ನು. ಅದನ್ನು ನಾವು ಮುಂಬರುವ ವರ್ಷಗಳಲ್ಲಿಯೂ ಮುಂದುವರಿಸುತ್ತೇವೆ ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದು ಮನದ ಆಶಯವನ್ನು ಹಂಚಿಕೊಂಡಿದ್ದಾರೆ.
2008ರ ಈ ದಿನ ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ನಡೆಸಿದ ಮುಂಬೈ ದಾಳಿಯಲ್ಲಿ ವಿದೇಶಿಗರು, ಪೊಲೀಸರು ಸೇರಿದಂತೆ ಅನೇಕರು ಬಲಿಯಾಗಿದ್ದರು. ಈ ಸಂದರ್ಭ ನಾನು ಅವರಿಗೆ ಗೌರವ ಅರ್ಪಿಸುತ್ತೇನೆ. ಭಾರತವು ತನ್ನ ಆ ಗಾಯಗಳನ್ನು ಮರೆಯಲು ಸಾಧ್ಯವಿಲ್ಲ. ಇಂದು ಭಾರತ ಭಯೋತ್ಪಾದನೆ ವಿರುದ್ಧ ಹೊಸ ನೀತಿಗಳೊಂದಿಗೆ ಹೋರಾಡುತ್ತಿದೆ. ಉಗ್ರವಾದದ ವಿರುದ್ಧದ ಹೋರಾಟ ಮಾಡುತ್ತಿರುವ ನಮ್ಮ ಭದ್ರತಾ ಸಿಬ್ಬಂದಿಗೂ ವಂದಿಸುತ್ತೇನೆ ಎಂದಿದ್ದಾರೆ.