ಸಿದ್ದರಾಮಯ್ಯ, ಡಿಕೆಶಿ ಜತೆ 26 ಸಚಿವರು ಪ್ರಮಾಣವಚನ ಸ್ವೀಕಾರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಕಾಂಗ್ರೆಸ್‌ನ ಹೊಸ ಸರ್ಕಾರ (Congress government) ಶನಿವಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅವರ ಜತೆ ಸುಮಾರು 26 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava stadium) ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತ್ಯಾವರಚಂದ್‌ ಗೆಹ್ಲೋಟ್‌ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಲಿದ್ದಾರೆ.

ಸಿಎಂ, ಡಿಸಿಎಂ ಆಯ್ಕೆಯ ಬಳಿಕ ಅತ್ಯಂತ ಮಹತ್ವದ್ದಾದ ಮಂತ್ರಿಗಳು ಯಾರು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಶುಕ್ರವಾರ ಮಧ್ಯಾಹ್ನ ದಿಲ್ಲಿಗೆ ತೆರಳಿದ್ದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ಜತೆಯಾಗಿ ಮತ್ತು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ಇದಾದ ಬಳಿಕ ಮಂತ್ರಿಗಳ ಒಂದು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಇದಾದ ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರೂ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಇಬ್ಬರೂ ಬರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸಂಪುಟ ಸೇರಲಿರುವ ಶಾಸಕರು ಯಾರು?

ಸಿದ್ದರಾಮಯ್ಯ ಅವರ ಸಂಪುಟಕ್ಕ ಮೊದಲ ಹಂತದಲ್ಲಿ 25 ಶಾಸಕರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಎಐಸಿಸಿ ಮೂಲಗಳಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ 34 ಮಂದಿಗೆ ಹುದ್ದೆ ನೀಡಲು ಅವಕಾಶವಿದೆ. ಇದೀಗ ಸಿಎಂ, ಡಿಸಿಎಂ ಹಾಗು 25 ಸಚಿವರು ಶನಿವಾರದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರ .

25 ಸಂಭಾವ್ಯ ಸಚಿವರಲ್ಲಿ ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರು ಸ್ಪೀಕರ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಉಳಿದಂತೆ , ರಾಮಲಿಂಗಾರೆಡ್ಡಿ,ಕೆ.ಜೆ ಜಾರ್ಜ್, .ಕೃಷ್ಣಬೈರೇಗೌಡ, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ಶರತ್ ಬಚ್ಚೇಗೌಡ, ಚಲುವರಾಯಸ್ವಾಮಿ, ಎಂ.ಸಿ. ಸುಧಾಕರ್‌, ಎಚ್ ಸಿ ಮಹಾದೇವಪ್ಪ, .ಪುಟ್ಟರಂಗ ಶೆಟ್ಟಿ, ಮಧುಬಂಗಾರಪ್ಪ, ಯುಟಿ ಖಾದರ್, ಆರ್ ವಿ ದೇಶಪಾಂಡೆ, ಶಾಮನೂರು ಮಲ್ಲಿಕಾರ್ಜುನ, ಸಲೀಂ ಅಹಮದ್,
ಜಗದೀಶ್ ಶೆಟ್ಟರ್, ಎಂಬಿ ಪಾಟೀಲ್ಸಂ, ತೋಷ್ ಲಾಡ್,ಪ್ರಿಯಾಂಕಾ ಖರ್ಗೆ, ಲಕ್ಷ್ಮಣ ಸವದಿ,ಡಾ.ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಎಚ್ ಮುನಿಯಪ್ಪ, .ಕೆ.ಎನ್ ರಾಜಣ್ಣ, ಶರಣು ಪ್ರಕಾಶ್ ಪಾಟೀಲ್ ಹೆಸರು ಕೇಳಿಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!