ಸೆಪ್ಟೆಂಬರ್‌ ಜಿಎಸ್‌ಟಿ ಸಂಗ್ರಹದಲ್ಲಿ ಶೇ.26ರಷ್ಟು ಏರಿಕೆ: 1.47 ಲಕ್ಷ ಕೋಟಿ ರೂ. ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸೆಪ್ಟೆಂಬರ್‌ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹವು ಶೇ.26 ರಷ್ಟು ಏರಿಕೆಯಾಗಿದ್ದು ₹1.47 ಲಕ್ಷ ಕೋಟಿ ರುಪಾಯಿಗೂ ಅಧಿಕ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸತತವಾಗಿ ಕಳೆದ ಏಳು ತಿಂಗಳಿನಿಂದ ₹ 1.40 ಲಕ್ಷ ಕೋಟಿಯನ್ನು ಮೀರಿದೆ ಎಂದು ಅದು ಉಲ್ಲೇಖಿಸಿದೆ.

ಸೆಪ್ಟೆಂಬರ್ 2022 ರಲ್ಲಿ ಒಟ್ಟು ಜಿಎಸ್‌ಟಿ ಆದಾಯ 1,47,686 ಕೋಟಿ ರೂ, ಇದರಲ್ಲಿ ಕೇಂದ್ರ ಜಿಎಸ್‌ಟಿ 25,271 ಕೋಟಿ ರೂ, ರಾಜ್ಯ ಜಿಎಸ್‌ಟಿ 31,813 ಕೋಟಿ ರೂ, ಸಂಯೋಜಿತ ಜಿಎಸ್‌ಟಿ 80,464 ಕೋಟಿ ರೂ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹41,215 ಕೋಟಿ ಸೇರಿದಂತೆ ) ಮತ್ತು ಸೆಸ್ ₹10,137 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹ 856 ಕೋಟಿ ಸೇರಿದಂತೆ) ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!