Wednesday, February 8, 2023

Latest Posts

ಉ.ಭಾರತದಲ್ಲಿ ಮುಂದುವರಿದ ಶೀತದ ಅಲೆ: 26 ರೈಲು, ವಿಮಾನಗಳ ಕಾರ್ಯಾಚರಣೆ ವಿಳಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಭಾರತದಲ್ಲಿ ಚಳಿ ಹಾಗೂ ದಟ್ಟ ಮಂಜಿನ ವಾತಾವರಣ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಡಿಮೆ ಗೋಚರತೆ ಪ್ರಮಾಣ ದಾಖಲಾಗಿದೆ. ಮಂಜಿನ ವಾತಾವರಣವು ರಸ್ತೆ, ರೈಲು ಹಾಗೂ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದ್ದು, ಕಾರ್ಯಾಚರಣೆ ವಿಳಂಬವಾಗಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೆಲವು ವಿಮಾನಗಳು (ದೆಹಲಿ-ಶಿಮ್ಲಾ, ದೆಹಲಿ-ಕಠ್ಮಂಡು, ದೆಹಲಿ-ಚೆನ್ನೈ, ದೆಹಲಿ-ಜೈಸಲ್ಮೇರ್, ದೆಹಲಿ-ಬರೇಲಿ, ದೆಹಲಿ-ಮುಂಬೈ, ದೆಹಲಿ-ವಾರಣಾಸಿ, ದೆಹಲಿ-ಶ್ರೀನಗರ, ದೆಹಲಿ-ಜೈಪುರ, ದೆಹಲಿ-ಗುವಾಹಟಿ) ಮಂಜು ಮತ್ತು ಚಳಿಯಿಂದಾಗಿ ವಿಳಂಬವಾಗಲಿದೆ ಎಂದು ದೆಹಲಿ ಏರ್‌ಪೋರ್ಟ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಂಜಿನಿಂದಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ ಕೂಡಾ 26 ರೈಲುಗಳು ತಡವಾಗಿ ಓಡುತ್ತಿವೆ.

Image

ಉತ್ತರ ಭಾರತದ ಕೆಲವು ಭಾಗಗಳಲ್ಲಿ ಚಾಲ್ತಿಯಲ್ಲಿರುವ ಶೀತ ಅಲೆಯ ನಡುವೆ, ದೆಹಲಿಯ ಸಫ್ದರ್‌ಜಂಗ್‌ನಲ್ಲಿ ಇಂದು ಬೆಳಿಗ್ಗೆ 6.10 ಕ್ಕೆ ಕನಿಷ್ಠ ತಾಪಮಾನ 5.9 ° C ದಾಖಲಾಗಿದೆ. ಪಾಲಂ ಪ್ರದೇಶದಲ್ಲಿ ಗೋಚರತೆ 100 ಮೀಟರ್‌ನಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!