2ನೇ ಟೆಸ್ಟ್​: 262 ರನ್​ಗೆ ಭಾರತ ಆಲೌಟ್​; ಆಸೀಸ್​ 62 ರನ್​ ಮುನ್ನಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್​ ಪೈಪೋಟಿಯತ್ತ ಸಾಗುತ್ತಿದ್ದು, ನಾಥನ್​ ಲಿಯಾನ್​ ಮಾರಕ ಸ್ಪಿನ್​ ದಾಳಿಗೆ ಬ್ಯಾಟಿಂಗ್ ವೈಫಲ್ಯದಿಂದ ಭಾರತ 262 ರನ್​ಗಳಿಗೆ ಆಲೌಟ್​ ಆಗಿದೆ. 2ನೇ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಉಸ್ಮಾನ್​ ಖವಾಜಾ ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. 2ನೇ ದಿನದಾಟದ ಮುಕ್ತಾಯದ ವೇಳೆಗೆ ಆಸೀಸ್​ 1 ವಿಕೆಟ್​ಗೆ 62 ರನ್​ ಗಳಿಸಿದೆ.

2ನೇ ದಿನದಾಟದ ಕೊನೆಯಲ್ಲಿ ಭಾರತವನ್ನು ಆಸೀಸ್​ ಪಡೆ ಆಲೌಟ್​ ಮಾಡಿತು. ಮೊದಲ ದಿನದಲ್ಲಿ ನಾಯಕ ರೋಹಿತ್​ ಶರ್ಮಾ 13 ರನ್, ಉಪನಾಯಕ ಕೆಎಲ್​ ರಾಹುಲ್​ 04 ರನ್​ಗಳೊಂದಿಗೆ ಇನಿಂಗ್ಸ್​ ಆರಂಭಿಸಿದರು. ಬ್ಯಾಟಿಂಗ್​ ವೂಫಲ್ಯ ಅನುಭವಿಸುತ್ತಿರುವ ರಾಹುಲ್​ ಮತ್ತೆ ವಿಫಲರಾದರು. 17 ರನ್​ ಗಳಿಸಿದ್ದಾಗ ನಾಥನ್​ ಲಿಯಾನ್​ ಸ್ಪಿನ್​ಗೆ ಮೊದಲ ಬಲಿಯಾದರು. ಬಳಿಕ ಮೊದಲ ಟೆಸ್ಟ್​ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ರೋಹಿತ್​ 32 ರನ್​ಗೆ ವಿಕೆಟ್​ ನೀಡಿದರು.

ಆಸ್ಟ್ರೇಲಿಯಾ 2 ನೇ ಇನ್ನಿಂಗ್ಸ್ :

ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಆಸೀಸ್​ 1 ರನ್​ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್​ ಆರಂಭಿಸಿತು. ಮೊದಲ ಇನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿದ್ದ ಉಸ್ಮಾನ್​ ಖವಾಜಾ ಮತ್ತು ಟ್ರೇವಿಸ್​ ಹೆಡ್​ ಇನಿಂಗ್ಸ್​ ಆರಂಭಿಸಿದರು. 5.5 ನೇ ಓವರ್​ನಲ್ಲಿ ರವೀಂದ್ರ ಜಡೇಜಾರ ಎಸೆತದಲ್ಲಿ ಖವಾಜಾ ಔಟಾದರು.

ಇನ್ನೊಂದೆಡೆ ಟ್ರೇವಿಸ್​ ಹೆಡ್​ ಬಿರುಸಿನ ಬ್ಯಾಟ್​ ಮಾಡಿದರು. 40 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್​ಗಳುಳ್ಳ 39 ರನ್​ ಗಳಿಸಿದರೆ, ಮಾರ್ನಸ್​ ಲಬುಶೇನ್​ 16 ರನ್​ ಗಳಿಸಿ ಔಟಾಗದೆ ಉಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!