Thursday, August 18, 2022

Latest Posts

3 ವರ್ಷಗಳಲ್ಲಿ 1000 ದಲಿತ್ ಸ್ಟಾರ್ಟ್‌ಅಪ್: ಮೋದಿ ಸರಕಾರದ ಮಹತ್ವದ ಯೋಜನೆ

ಹೊಸದಿಲ್ಲಿ : ದಲಿತ ಸಮುದಾಯವನ್ನು ಮುಖ್ಯವಾಹಿನಿಯಲ್ಲಿ ಮಿಳಿತಗೊಳಿಸುವ ಮತ್ತು ಸಮುದಾಯದ ಯುವಜನರನ್ನು ಸಬಲರನ್ನಾಗಿಸುವ ಮಹತ್ವದ ಕ್ರಮವೊಂದರಲ್ಲಿ ನರೇಂದ್ರ ಮೋದಿ ಸರಕಾರವು, ಮುಂದಿನ ಮೂರು ವರ್ಷಗಳೊಳಗೆ ದೇಶದಲ್ಲಿ 1000ದಲಿತ್ ಸ್ಟಾರ್ಟ್‌ಅಪ್‌ಗಳನು ಆರಂಭಿಸುವ ಯೋಜನೆ ರೂಪಿಸಿದೆ.
ದಲಿತ ಸಮುದಾಯದ ಟೆಕಿಗಳಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಒದಗಿಸಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಿ ವಾಣಿಜ್ಯಿಕವಾಗಿ ಇವನ್ನು ಬಲಗೊಳಿಸುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ.“ಅಂಬೇಡ್ಕರ್ ಸೋಷಿಯಲ್ ಇನ್ನೋವೇಷನ್ ಇನ್‌ಕ್ಯೂಬೇಷನ್ ಮಿಷನ್” ಹೆಸರಿನಡಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ರೂಪಿಸುತ್ತಿರುವ ಈ ಯೋಜನೆ ಯುವ ದಲಿತ ಟೆಕ್ಕಿಗಳಲ್ಲಿ ಹೊಸ ಅನ್ವೇಷಣಾ ಚಿಂತನೆಗಳನ್ನು ಬೆಳೆಸಲು ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ತಂತ್ರಜ್ಞಾನ ಅಥವಾ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಪರಿಶಿಷ್ಟ ಸಮುದಾಯ ಮತ್ತು ಅಂಗವೈಕಲ್ಯ ಹೊಂದಿರುವ ಯುವವರ್ಗದಿಂದ ಆಯ್ದ ಚಿಂತನೆಗಳನ್ನು ಆಧರಿಸಿ ಸಂಶೋಧನಾ ಉತ್ಪನ್ನಗಳು, ಸೇವೆಗಳು ಮತ್ತು ಸೊಲ್ಯೂಷನ್‌ಗಳನ್ನು ಒಳಗೊಂಡಂತೆ ಈ ಯೋಜನೆ ರೂಪುಗೊಳ್ಳಲಿದೆ.ಈ ಯೋಜನೆ ದೇಶದ ಪರಿಶಿಷ್ಟ ಸಮುದಾಯದ ಯುವಜನರ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!