Wednesday, August 10, 2022

Latest Posts

3 ವರ್ಷದ ಮಗುವಿನಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ

ಹೊಸ ದಿಗಂತ ವರದಿ ಬಳ್ಳಾರಿ:

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಶುಕ್ರವಾರ ಬಳ್ಳಾರಿಯಲ್ಲಿ ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಿ ದೇಗುಲ ಆವರಣದಲ್ಲಿ ಚಾಲನೆ ನೀಡಲಾಯಿತು.

ಈ ವೇಳೆ ಕಳೆದ ಮೂರು ವರ್ಷಗಳಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಗರದ ಮೂರು ವರ್ಷದ ಧನಶ್ರೀ ಎನ್ನುವ ಮಗುವೊಂದು ಹುಂಡಿಯ ಹಣವನ್ನು ನೀಡಿ ಗಮನ ಸೆಳೆಯಿತು. ಇದಕ್ಕೂ ಮುನ್ನ ಸಂಘ ಪರಿವಾರದ ಹಿರೀಯರು, ಭಾಜಪಾ ಮುಖಂಡರು, ವಿಶ್ವಹಿಂದೂ ಪರಿಷತ್ ಪದಾಧಿಕಾರಿಗಳು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಶ್ರೀರಾಮ ಭಕ್ತರು ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ನಂತರ ದೇಗುಲ ಆವರಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬೂಡಾ ಅಧ್ಯಕ್ಷ ದಮ್ಮೂರ್ ಶೇಖರ್, ಕಲ್ಯಾಣ ಶ್ರೀಮಠದ ಕಲ್ಯಾಣ ಸ್ವಾಮೀಜಿ ಸೇರಿದಂತೆ ಇತರರು ಪುಷ್ಪಗಳನ್ನು ಸಮರ್ಪಿಸಿ ನಿಧಿ ಸಂಗ್ರಹ ಮಹಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಬಹುತೇಕ ಎಲ್ಲ ಮುಖಂಡರು, ಕಾರ್ಯಕರ್ತರು ಹಣ ಹಾಗೂ ಚೆಕ್ ಗಳನ್ನು ನೀಡಿದರು. ಈ ವೇಳೆ ಜೈ ಶ್ರೀರಾಮ್, ಜೈ ಶ್ರೀರಾಮ್ ಎನ್ನುವ ಭಕ್ತಿಯ ಜಯಘೋಷಗಳು ಮೊಳಗಿದವು.

ಈ ವೇಳೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಐನಾಥ್ ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ ಮೋತ್ಕರ್, ಕೆಎಂಎಫ್‌ ನಿರ್ದೇಶಕ ವೀರಶೇಖರ ರೆಡ್ಡಿ, ವಿಭಾಗ ಸಂಘಟನಾ ಕಾರ್ಯದರ್ಶಿ ಅನಿಲ್ ನಾಯ್ಡು, ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಜಿಲ್ಲಾಧ್ಯಕ್ಷ ಡಾ.ಬಿ.ಕೆ.ಸುಂದರ್, ಸಂಘ ಪರಿವಾರದ ಹಿರೀಯರಾದ ಪ್ರಸನ್ನ ಜೀ, ನರೇಶ್ ಚಿರಾನಿಯಾ, ಕೈಲಾಶ್ ಬಾಗ್ರೆಚಾ, ಬಿಜೆಪಿ ನಗರ ಅಧ್ಯಕ್ಷ ವೆಂಕಟೇಶ್ವರ, ಹಿಂದೂ ಜಾಗರಣ ವೇದಿಕೆಯ ಶ್ರೀರಾಮ್ , ವಿಶ್ವ ಹಿಂದೂ ಪರಿಷತ್ ಅಶೋಕ್, ಬಿಜೆಪಿ ಯುವ ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ರಾಜೇಶ್ , ರಾಮಾಂಜಿನಿ ಸೇರಿದಂತೆ ಶ್ರೀರಾಮ ಭಕ್ತರು ಇತರರು ಇದ್ದರು. ಭಾಜಪಾ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಶ್ರೀರಾಮ ಭಕ್ತರು ನಗರದ ಮನೆ ಮನೆಗೆ ತೆರಳಿ ಶ್ರೀರಾಮ‌ ಮಂದಿರ ನಿರ್ಮಾಣಕ್ಕೆ ನಿಧಿಯನ್ನು ಸಂಗ್ರಹಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss