3.47 ಕೋಟಿ ರೂ.ವೆಚ್ಚದ ಕಾಮಗಾರಿಗೆ ಚಾಲನೆ

ಹೊಸದಿಗಂತ ವರದಿ, ಸುಂಟಿಕೊಪ್ಪ:

ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಕುಡಿಯುವ ನೀರು, ಒಳಚರಂಡಿ, ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೂಮಿಪೂಜೆ ನೇರವೇರಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ಜನರ ಮೂಲಭೂತ ಸೌಲಭ್ಯಗಳಿಗೆ ಸಾಕಷ್ಟು ಹಣ ವಿನಿಯೋಗಿಸುತ್ತಿದೆ. ಗುಣಮಟ್ಟದ ಕಾಮಗಾರಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಪರಿಶೀಲಿಸಬೇಕು ಎಂದು ಶಾಸಕರು ಹೇಳಿದರು.
ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿರುವ ಬಗ್ಗೆ ದೂರು ಬಂದಿದೆ. ಸಂಬಂಧಿಸಿದವರು ರಸ್ತೆ ನಿರ್ಮಿಸುವಾಗ ಜಾಗ ಬಿಟ್ಟುಕೊಡಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾದಾಪುರ ಮಾರುಕಟ್ಟೆ ರಸ್ತೆ, ಜಂಬೂರು, ಮೂವತ್ತೊಕ್ಲು ರಸ್ತೆ, ಕಾಂಡನಕೊಲ್ಲಿ ರಸ್ತೆ, ಜಂಬೂರು ಕುಡಿಯುವ ನೀರು, ಕೇಂದ್ರ ಜಲ ಜೀವನ್ ಯೋಜನೆ, ಎನ್‌ಡಿಆರ್‌ಎಫ್ ಯೋಜನೆ ಸೇರಿದಂತೆ ಜಿ.ಪಂ. ಮತ್ತು ಲೋಕಪಯೋಗಿ ಇಲಾಖೆಯಡಿ ಕೈಗೊಳ್ಳಲಾಗುವ ರೂ.3.47 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಮಾದಾಪುರ ಗ್ರಾ.ಪಂ ಅಧ್ಯಕ್ಷೆ ಕೆ.ಸಿ.ಶೀಲಾ, ಉಪಾಧ್ಯಕ್ಷ ಗೋಪಿ, ಗ್ರಾ.ಪಂ ಸದಸ್ಯರಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ಸುರೇಶ, ಮನು ಬಿದ್ದಪ್ಪ, ಜ್ಯೋತಿ, ಗಿರೀಶ, ಸೋಮಣ್ಣ, ನಿರೂಪ, ಮಾನಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ಜಿ.ಪಂ ಮಾಜಿ ಸದಸ್ಯ ಟಿ.ಸಿ.ಸಂದೇಶ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಪಂಡ ಉಮೇಶ, ಬಿಜೆಪಿ ಮುಖಂಡ ಕೊಪ್ಪತ್ತಂಡ ಗಣೇಶ, ಸುಭಾಷ್, ಜಿ.ಪಂ.ಅಭಿಯಂತರರಾದ ವಿರೇಂದ್ರ, ಪಿಡಬ್ಲ್ಯುಡಿ ಇಂಜಿನಿಯರ್ ಶ್ರೀನಿವಾಸ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!