ಪೊಲೀಸರ ಕಣ್ತಪ್ಪಿಸಿ ಕಾರಾಗೃಹದೊಳಗೆ ಗಾಂಜಾ ಎಸೆಯುತ್ತಿದ್ದ ಮೂವರ ಬಂಧನ

ಹೊಸದಿಗಂತ ವರದಿ, ಶಿವಮೊಗ್ಗ:

ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಒಳಗೆ ಕೈದಿಗಳಿಗೆ ಗಾಂಜಾ ಎಸೆಯುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರ್‌ಎಂಎಲ್ ನಗರದ ಅಜರುದ್ದಿನ್ (24), ಕಾರ್ಕ್ ಪೇಟೆಯ ಮಹಮ್ಮದ್ ಫೈಸಲ್ (20 )ಭರ್ಮಪ್ಪ ನಗರದ ರೋಷನ್ ಜಮೀ್(19) ಬಂಧಿತ ಆರೋಪಿಗಳಾಗಿದ್ದು, 9000 ರೂ .ವೌಲ್ಯದ 240 ಗ್ರಾಂ ತೂಕದ ಗಾಂಜಾ, 1 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಮೊಪೆಡ್‌ ಗಾಡಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕೇಂದ್ರ ಕಾರಾಗೃಹದ ಹೊರಭಾಗದಿಂದ ಕಾಂಪೌಂಡ್ ಒಳಗೆ ಗಾಂಜಾ ಎಸೆಯಲು ತೆರೆಳುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಕಾರಾಗೃಹದ ಪಶ್ಚಿಮ ಭಾಗದ ಕಾಂಪೌಂಡ್ ಹಿಂಭಾದ ತುಂಗಾ ನಗರ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಗಳು ಕಾದು ಕುಳಿತು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!