ಮದುವೆ ಮನೆಯಲ್ಲಿ ಘೋರ ದುರಂತ; ಗೋಡೆ ಕುಸಿದು ಮೂವರ ಸಾವು, 34 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಪ್ರದೇಶದ ಲಖನೌ ನಲ್ಲಿನ ಬಿಜ್ನೋರ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಅವಘಡವೊಂದು ನಡೆದಿದೆ.
ಅಲ್ಲಿನ ಮನೆಯೊಂದರಲ್ಲಿ ಮದುವೆ ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಾಕಷ್ಟು ಮಂದಿ ಮನೆಯಲ್ಲಿ ನೆರೆದಿದ್ದರು. ಈ ವೇಳೆ ಏಕಾಏಕಿ ಮನೆಯ ಬಾಲ್ಕನಿ ಮತ್ತು ಗೋಡೆ ಕುಸಿದಿದ್ದರಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 34 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸರೋಜಿನಿ ನಗರ ಪೊಲೀಸ್ ವೃತ್ತದ ಬಳಿ ಈ ದುರಂತ ಸಂಭವಿಸಿದೆ. ಮೃತರಲ್ಲಿ 5 ವರ್ಷದ ಶ್ರದ್ಧಾ ಎಂಬ ಮಗು ಕೂಡ ಸೇರಿದೆ. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದುವೆಯ ಆಚರಣೆಗಳನ್ನು ಮುಗಿಸಿ ಅತಿಥಿಗಳು ಊಟಕ್ಕೆಂದು ಕುಳಿತಿದ್ದಾಗ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ಮನೆಯ ಗೋಡೆ ಮತ್ತು ಬಾಲ್ಕನಿ ಕುಸಿಯಿತು. ಅವಶೇಷಗಳಡಿ ಅನೇಕ ಮಂದಿ ಸಿಲುಕಿದರು. ಮದುವೇ ಮನೆಯ ಸಂಭ್ರಮವೇ ಇದರಿಂದ ನಾಶವಾಯಿತು. ಕೆಲವೇ ನಿಮಿಷಗಳಲ್ಲಿ ಎಲ್ಲವೂ ಮುಗಿದುಹೋಯಿತು ಎಂದು ಘಟನೆಯ ಪ್ರತ್ಯಕ್ಷದರ್ಶಿ ಅನಿಕೇತ್ ಸಿಂಗ್ ಎಂಬುವವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!