Monday, July 4, 2022

Latest Posts

ಬಸವಸಾಗರದಿಂದ 3 ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ 

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಯಾದಗಿರಿ:

ಕೃಷ್ಣಾ ಮತ್ತು ಭೀಮಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ನದಿಗೆ ಮತ್ತು ಭೀಮಾ ನದಿಗೆ ನೀರನ್ನು ಬಿಡುವ ಸಾಧ್ಯತೆಯಿರುತ್ತದೆ.
ಪ್ರಸ್ತುತ ಕೃಷ್ಣ ನದಿಯಿಂದ 2,30,680 ಕ್ಯೂಸೆಕ್ಸ್ ಹಾಗೂ ಭೀಮಾ ನದಿಯಿಂದ 13,500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.

ಇವತ್ತು ನಾರಾಯಣಪುರ ಜಲಾಶಯದಿಂದ 3,00,000 ಕ್ಯೂಸೆಕ್ಸ್ ನೀರು ಹರಿದು ಬರುವ ಸಾದ್ಯತೆ ಇದ್ದು ಕಾರಣ ನೀರು ಹರಿದು ಬಂದಾಗ ಶಹಾಪುರ ತಾಲುಕಿನ ಕೊಳ್ಳೂರು (ಎಂ) ಸೇತುವೆಯು ಮುಳುಗಡೆಯಾಗುವ ಮತ್ತು. ಸೇತುವೆ ರಸ್ತೆ ಸಂಪರ್ಕವು ಕಡಿತಗೊಳ್ಳುವ ಸಾಧ್ಯತೆ ಇರುತ್ತದೆ. ಸದರಿ ಸೇತುವೆಯನ್ನು ನಿಗಾವಹಿಸಲು ಪೊಲೀಸ ಸಿಬ್ಬಂದಿಯನ್ನು ನಿಯೋಜಿಸಿ ಮುಂಜಾಗ್ರತಾಕ್ರಮ ಕೈಗೊಳ್ಳಲಾಗಿದೆ. ಹಾಗೂ ಸದರಿ ಸೇತುವೆಯ ಮೂಲಕ ಜನಗಳ ಮತ್ತು ವಾಹನಗಳ ಸಾಗಾಟ ನಿರ್ಭಂದಿಸಲಾಗಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಆದೇಶವನ್ನು ಪಾಲಿಸಲು ಕೋರಲಾಗಿದೆ.

ಯಾವದೇ ತುರ್ತು ಸಂದರ್ಭದಲ್ಲಿ ನದಿ ಪಾತ್ರ ಮತ್ತು ಹಳ್ಳಗಳ ಕಡೆಗೆ ಜನ ಮತ್ತು ಜಾನುವಾರುಗಳು ಹಾಗೂ ಮೀನುಗಾರರು ನದಿ ತೀರಿಕ್ಕೆ ಹೋಗದಂತೆ ಎಚ್ಚರವಹಿಸಬೇಕೆಂದು ಈಗಾಗಲೇ ಮುಂಜಾಗ್ರತ ಕ್ರಮವಾಗಿ ಗ್ರಾಮ ಪಂಚಾಯತ ಮೂಲಕ ಎಲ್ಲಾ ಹಳ್ಳಿಗಳಿಗೆ ಡಂಗುರ ಸಾರಿಸಲಾಗಿದೆ.

ನದಿ ತೀರದಲ್ಲಿ ಬರುವ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಾಂದರ್ಭಿಕ ಅನುಸಾರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ದೇಶನ ನೀಡಲಾಗಿದೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು ಜನರು ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ.

ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ಸಹಾಯವಾಣಿ 08473-253800 ಸಂಖ್ಯೆಗೆ ಕರೆ ಮಾಡಲು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ . ಅವರು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss