Thursday, August 18, 2022

Latest Posts

ಛತ್ತೀಸ್‌ಗಢದಲ್ಲಿ ಎನ್ಕೌಂಟರ್: ಮೂವರು ಮಹಿಳಾ ಮಾವೋವಾದಿಗಳ ಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಅದ್ವಾಲ್ ಮತ್ತು ಕುನೇರಸ್‌ನ ದಟ್ಟ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ವಾಮೋವಾದಿಗಳನ್ನು ರಾಜಾ ಮುಚ್ಚಕಿ, ಗೀತಾ ಮತ್ತು ಜ್ಯೋತಿ ಎಂದು ಗುರುತಿಸಲಾಗಿದೆ.

ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವಿಶೇಷ ಪೊಲೀಸ್ ಪಡೆ ಮಾವೋವಾದಿಗಳ ಚಲನವಲನವನ್ನು ಗಮನಿಸಿ ಶರಣಾಗುವಂತೆ ಹೇಳಿದ್ದರು. ಆ ವೇಳೆ ಮಾವೋವಾದಿಗಳು ಪೊಲೀಸ್ ಪಡೆಯತ್ತ ಗುಂಡು ಹಾರಿಸಲು ಯತ್ನಿಸಿದ್ದು,  ಪ್ರತೀಕಾರವಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಮೂವರು ಮಹಿಳಾ ಮಾವೋವಾದಿಗಳು ಹತರಾಗಿದ್ದಾರೆ ಎಂದು  ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾವೋವಾದಿ ಪಕ್ಷದ ಹಿರಿಯ ನಾಯಕ ಅನಾರೋಗ್ಯದಿಂದ ಸಾವನ್ನಪ್ಪಿದ ನಂತರ ಇದು ಎರಡನೇ ಎನ್‌ಕೌಂಟರ್ ಆಗಿದೆ. ಕಳೆದ ವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಾವೋವಾದಿಗಳು ಹತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!