Wednesday, August 17, 2022

Latest Posts

30 ನಿಮಿಷದಲ್ಲಿ ಮಾಡುವ ಸಿಂಪಲ್ ಟೇಸ್ಟಿ Biriyani ರೆಸಿಪಿ ನಿಮಗಾಗಿ…

ಪ್ರತಿ ದಿನ ಮನೆಯಲ್ಲಿ ಅನ್ನ ಸಾಂಬಾರ್ ಪಲ್ಯ ತಿಂದು ಸಾಕಾಗಿರುತ್ತದೆ. ಅದಕ್ಕೆ ಒಂದಷ್ಟು ಸಿಂಪಲ್ ರೆಸಿಪಿ ನಿಮಗಾಗಿ ನೀಡಲಿದ್ದೇವೆ. ಇಂದು ಮನೆಯಲ್ಲಿಯೇ ರುಚಿಯಾದ ಫ್ಲೇವರ್ ಇರುವ ವೆಜ್ ಬಿರಿಯಾನಿ ಮಾಡುವುದನ್ನು ತಿಳಿದುಕೊಳ್ಳೊಣ…

ಬೇಕಾಗುವ ಪದಾರ್ಥಗಳು:
ಬಾಸ್ಮತಿ ಅಕ್ಕಿ
ನಿಮ್ಮಿಷ್ಟದ ತರಕಾರಿಗಳು: ಈರುಳ್ಳಿ, ಬಟಾಣಿ,ಕ್ಯಾರೆಟ್, ಹುರುಳಿಕಾಯಿ
ಪಲಾವ್ ಎಲೆ
ಚಕ್ಕೆ ಲವಂಗ
ಏಲಕ್ಕೆ
ಜೀರಿಗೆ
ಉಪ್ಪು
ಎಣ್ಣೆ
ಪುದಿನ
ಚಿಲ್ಲಿ ಪೌಡರ್
ಅರಿಶಿಣ
ಗರಂ ಮಸಾಲ ಅಥವಾ ಬಿರ್ಯಾನಿ ಮಸಾಲ
ಮೊಸರು
ತುಪ್ಪ

ಮಾಡುವ ವಿಧಾನ:

  • ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನಸಿಡಿ. ನಂತರ ಕುಕ್ಕರ್ ನಲ್ಲಿ ಎಣ್ಣೆ, ಜೀರಿಗೆ, ಪಲಾವ್ ಎಲೆ, ಏಲಕ್ಕೆ, ಚಕ್ಕೆ, ಲವಂಗ ಹಾಕಿ ಚೆನ್ನಾಗಿ ಫ್ರೈ ಮಾಡಿ.
  • ನಂತರ ಸ್ವಲ್ಪ ಸಾಸಿವೆ, ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಬೇಯಿಸಿ, ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗು ಫ್ರೈ ಮಾಡಿ.
  • ಬಳಿಕ ಹೆಚ್ಚಿರುವ ಎಲ್ಲಾ ತರಕಾರಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    ತದನಂತರ ಸ್ವಲ್ಪ ಪುದಿನ, ಕೊತ್ತಂಬರಿ, ಮೆಣಸಿನ ಪುಡಿ, ಅರಿಶಿಣ, ಉಪ್ಪು, ಗರಂ ಮಸಾಲ ಅಥವಾ ಬಿರ್ಯಾನಿ ಮಸಾಲ ಮೊಸರು ಹಾಕಿ ಕಲಿಸಿಕೊಳ್ಳಿ.
  • ಕೊನೆಯಲ್ಲಿ ನೆನಸಿಟ್ಟ ಅಕ್ಕಿಯಲ್ಲಿನ ನೀರು ತೆಗೆದು ಕುಕ್ಕರ್ ಗೆ ಅಕ್ಕಿ ಹಾಕಿ ಕುಕ್ಕರ್ ನಲ್ಲಿ ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ಬೇಯಿಸಿ.
  • ನಂತರ ಸ್ವಲ್ಪ ಈರುಳ್ಳಿ ಹಾಗೂ ತುಪ್ಪ ಹಾಕಿ ಅಲಂಕರಿಸಿದರೆ ರುಚಿ ರುಚಿಯಾದ ಬಿರಿಯಾನಿ ಸವಿಯಲು ಸಿದ್ಧ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!