ಹೊಸದಿಗಂತ ಆನ್ಲೈನ್ ಡೆಸ್ಕ್:
ಕಳೆದ ಮೂವತ್ತು ವರ್ಷಗಳಲ್ಲಿ ಅತೀ ಕಡಿಮೆ ಉಷ್ಣಾಂಶ ದಾಖಲಿಸುವ ಮೂಲಕ ಶ್ರೀನಗರ ಹೊಸ ದಾಖಲೆ ಬರೆದಿದೆ.
ಗುರುವಾರ ಇಲ್ಲಿನ ತಾಪಮಾನ ಮೈನಸ್ 8.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರ ಪರಿಣಾಮವಾಗಿ ಕಾಶ್ಮೀರದ ಪ್ರಖ್ಯಾತ ದಾಲ್ ಸರೋವರ ಸಹಿತ ಹಲವು ಜಲಮೂಲಗಳು ಹೆಪ್ಪುಗಟ್ಟಿ ಮಂಜುಗಡ್ಡೆಯಾಗಿವೆ.
ಇದಕ್ಕೂ ಮುನ್ನ 1995 ರಲ್ಲಿ ಶ್ರೀನಗರದ ಕನಿಷ್ಠ ತಾಪಮಾನವು ಮೈನಸ್ 8.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆ ಬಳಿಕ 1991ರಲ್ಲಿ ಲ್ಲಿನ ಉಷ್ಣಾಂಶವು ಮೈನಸ್ 11.3 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. 1993 ರಲ್ಲಿ ಕನಿಷ್ಠ ತಾಪಮಾನವು ಮೈನಸ್ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ಇದಲ್ಲದೆ, ಅಮರನಾಥ ಯಾತ್ರೆಯ ಶಿಬಿರವಾದ ಪಹಲ್ಗಾಮ್ನಲ್ಲಿ ಕೂಡಾ ತಾಪಮಾನ ಇಳಿಕೆಯಾಗಿದ್ದು, ಗುರುವಾರ ಮೈನಸ್ 11.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.