30 ವರ್ಷ ದಾಟಿದ ಮೇಲೆ ನಮ್ಮ ಅರ್ಧ ಆಯಸ್ಸು ಮಗಿದಂತೆ! ಅಂದರೆ ಕಲ್ಲು ತಿಂದರೂ ಕರಗಿಸ ಬಲ್ಲೆ ಎಂಬ ಹುಮ್ಮಸ್ಸು ನಮ್ಮಲ್ಲಿ ಇದ್ದರೂ ಅದಕ್ಕೆ ನಮ್ಮ ದೇಹ ಸಹಕರಿಸುವುದಿಲ್ಲ. ಹಾಗಾಗಿ ಆದಷ್ಟು ಒಳ್ಳೆಯ ಆಹಾರವನ್ನು ಅಂದರೆ ನಮ್ಮ ದೇಹಕ್ಕೆ ಬೇಕಾಗುವ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಗಳನ್ನು ನೀಡುವಂತಹ ಆಹಾರವನ್ನು ಸೇವಿಸಬೇಕು. ದೇಹಕ್ಕೆ ಹಾನಿ ಮಾಡುವಂತಹ ಆಹಾರವನ್ನು ಆದಷ್ಟು ಮೂವತ್ತು ವರ್ಷ ದಾಟಿದ ನಂತರ ಸೇವಿಸಬಾರದು. ಯಾವ ಆಹಾರವನ್ನು ಮೂವತ್ತು ವರ್ಷ ದಾಟಿದ ನಂತರ ಸೇವಿಸಬಾರದು ಎಂಬುದು ಇಲ್ಲಿದೆ ನೋಡಿ…
ಮೊಸರು:
ಮೊಸರಿನಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ. ಕೆನೆ ಅಂಶ ಹೆಚ್ಚಿರುತ್ತದೆ. ಮೊಸರನ್ನು ಮೊವತ್ತು ವರ್ಷದ ನಂತರ ಹೆಚ್ಚು ಸೇವಿಸಿದರೆ ಕೊಬ್ಬು ಹೆಚ್ಚುತ್ತದೆ.ದೇಹದ ತೂಕ ಹೆಚ್ಚುತ್ತದೆ.
ಸಿಹಿ:
ಹೆಚ್ಚು ಸಿಹಿ ಅಂಶ ಇರುವ ಪದಾರ್ಥಗಳನ್ನು ಸೇವಿಸಬೇಡಿ. ಮೂವತ್ತು ದಾಟುತ್ತಿದ್ದಂತೆಯೇ ನಮ್ಮಲ್ಲಿ ಕಮ್ಯೂನಿಟಿ ಪವರ್ ಕಡಿಮೆ ಆಗಿರುತ್ತದೆ.. ದೇಹದಲ್ಲಿ ಶುಗರ್ ಲೆವೆಲ್ ಹೆಚ್ಚುತ್ತಿರುತ್ತದೆ. ಶುಗರ್ ಕಂಟ್ರೋಲ್ನಲ್ಲಿ ಇರಬೇಕೆಂದರೆ ಕಡಿಮೆ ಸಿಹಿ ತಿನ್ನಬೇಕು.
ಧೂಮಪಾನ, ಮದ್ಯಪಾನ:
ಮೂವತ್ತು ದಾಟುತ್ತಿದ್ದಂತೆಯೇ ದೂಮಪಾನ, ಮಧ್ಯಪಾನ ಮಾಡುವುದನ್ನು ಕಂಪ್ಲೀಟ್ ನಿಲ್ಲಿಸಿ. ಏಕೆಂದರೆ ಇವುಗಳನ್ನು ಹೆಚ್ಚು ಸೇವಿಸಿದರೆ ಆರೋಗ್ಯ ಕೆಡುತ್ತದೆ. ಇವುಗಳಲ್ಲಿರುವ ವಿಷಕಾರಿ ಗುಣಗಳನ್ನು ಕೊಲ್ಲುವ ಶಕ್ತಿ ನಮ್ಮ ದೇಹಲ್ಲಿ ಕಡಿಮೆ ಆಗುತ್ತಿರುತ್ತದೆ.
ಮಾಂಸ ಆಹಾರ:
ಮೂವತ್ತು ದಾಟಿದ ನಂತರ ಮಾಂಸ ಆಹಾರವನ್ನು ತಿನ್ನುವುದು ಕಡಿಮೆ ಮಾಡಿ. ಏಕೆಂದರೆ ಮಾಂಸದಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ. ಮತ್ತು ಸೋಡಿಯಂ ಪ್ರಮಾಣ ಕೂಡ ಹೆಚ್ಚಿರುತ್ತದೆ. ಈ ಎರಡು ಅಂಶಗಳು ನಮ್ಮ ದೇಹಕ್ಕೆ ಹೆಚ್ಚಿನ ಕೊಬ್ಬಿನಾಂಶವನ್ನು ಸೃಷ್ಟಿಸುತ್ತದೆ. ಮಾಂಸವನ್ನು ಹೆಚ್ಚು ಸೇವಿಸಿದರೆ ಹೃದಯ ರೋಗಗಳು ಬರುತ್ತವೆ.ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಸೋಯಾ:
ಕೆಲವು ವರ್ಷಗಳು ಮಾತ್ರ ಸೋಯಾ ಒಳ್ಳೆಯದು. ಮೂವತ್ತು ವರ್ಷ ದಾಟಿದ ಮೇಲೆ ಸೋಯಾದಲ್ಲಿ ಇರುವಂತಹ ಎಣ್ಣೆ ಅಂಶ ನಮ್ಮ ದೇಹಕ್ಕೆ ಒಗ್ಗುವುದಿಲ್ಲ.ಒಂದು ಅಧ್ಯಯನದ ಪ್ರಕಾರ ಸೋಯಾ ಹೆಚ್ಚು ಸೇವಿಸುವ ಮಹಿಳೆಯರಿಗೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ. ಮತ್ತು ಮೂತ್ರಕೋಶದ ತೊಂದರೆ ಎದುರಾಗುತ್ತದೆ. ಹಾಗಾಗಿ ಸೋಯಾ ಜಾಸ್ತಿ ತಿನ್ನಬೇಡಿ.
ಕೋಲ್ಡ್ ಡ್ರಿಂಕ್ಸ್:
ಮೂವತ್ತು ವರ್ಷ ದಾಟುತ್ತಿದ್ದಂತೆಯೇ ನಿಮ್ಮ ದೇಹದಲ್ಲಿ ಇಮ್ಯೂನಿಟಿ ಪವರ್ ಕಡಿಮೆ ಆಗುತ್ತಿರುತ್ತದೆ. ಒಮ್ಮೆಲೇ ದೇಹ ಹೆಚ್ಚು ಬಿಸಿ, ಹೆಚ್ಚು ತಣ್ಣಗಿನ ಅಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ ಆಗಿರುತ್ತದೆ. ನಿಮಗೆ ಗೊತ್ತಿರಲಿ ಹೆಚ್ಚು ಕೋಲ್ಡ್ ಡ್ರಿಕ್ಸ್ ಕುಡಿಯುವವರಿಗೆ ನಿದ್ರಾ ಹೀನತೆ ಸಮಸ್ಯೆ ಎದುರಾಗುತ್ತದೆ. ಮೂವತ್ತರ ನಂತರ ಎಂಟು ತಾಸು ನಾವು ನಿದ್ದೆ ಮಾಡಲೇ ಬೇಕು.
ಮೈದಾ:
ಮೈದಾ ಹಿಟ್ಟಿನಿಂದ ತಯಾರಿಸುವ ಆಹಾರವನ್ನು ಮೂವತ್ತು ವರ್ಷ ದಾಟಿದ ಮೇಲೆ ಹೆಚ್ಚು ಸೇವಿಸಬೇಡಿ. ಏಕೆಂದರೆ ಮೈದಾ ಹಿಟ್ಟು ಕೊಬ್ಬಿನ ಅಂಶ ಹೆಚ್ಚಿಸುತ್ತದೆ. ಮತ್ತು ಮೈದಾ ಹಿಟ್ಟಿನ ಆಹಾರ ಬೇಗ ದೇಹದಲ್ಲಿ ಜೀರ್ಣವಾಗುವುದಿಲ್ಲ. ಗ್ಯಾಸ್ ಹೆಚ್ಚುತ್ತದೆ. ಹಾಗಾಗಿ ಮೈದಾ ಆಹಾರ ಸೇವಿಸಬೇಡಿ
ತಂಬಾಕು:
ತಂಬಾಕು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ ಆದರೂ ಕೆಲವೊಂದಿಷ್ಟು ಜನ ತಂಬಾಕು ಸೇವಿಸುತ್ತಾರೆ. ಪೂರ್ತಿ ನಿಮ್ಮಿಂದ ತಂಬಾಕು ಪದಾರ್ಥ ಸೇವಿಸುವುದನ್ನು ಬಿಡಲಾಗದಿದ್ದರೂ ಮೂವತ್ತು ವರ್ಷ ದಾಟಿದ ಮೇಲೆ ಕಡಿಮೆ ಪ್ರಮಾಣದಲ್ಲಿ ಸೇವಿಸಿ.