ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಹಾಸನ:
ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು,ಸೋಮವಾರ 30 ಮಂದಿ ಸೋಂಕಿಗೆ ಪ್ರಾಣತೆತ್ತಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 831ಕ್ಕೆ ಏರಿಕೆಯಾಗಿದ್ದು,ಇಂದು ಕೂಡ 1384 ಮಂದಿಯಲ್ಲಿ ಹೊಸದಾಗಿ ಸೋಂಕು ಧೃಡಪಟ್ಟಿದೆ. ಈವರೆಗೂ ಜಿಲ್ಲೆಯಲ್ಲಿ 65693ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು,ಮಾಚ್೯ 22ರಿಂದ ನಂತರ 36,524ಮಂದಿಗೆ ಸೋಂಕು ಧೃಡಪಟ್ಟಿದೆ.
ಸೋಮವಾರ ಸೋಂಕು ಧೃಡಪಟ್ಟವರ ಪೈಕಿ ಆಲೂರು 55,ಅರಕಲಗೂಡು 143,ಅರಸೀಕೆರೆ 204,ಬೇಲೂರು 164,ಚನ್ನರಾಯಪಟ್ಟಣ 237,ಹಾಸನ 337,ಹೊಳೆನರಸೀಪುರ 144 ಹಾಗೂ ಸಕಲೇಶಪುರದ 100ಮಂದಿ ಸೇರಿದ್ದಾರೆ.