ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ರಾಮನಗರ:
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಅವಶ್ಯಕವಾಗಿರುವ 30 ಆಕ್ಸಿಜನ್ಗ ಕಾನ್ಸನ್ಟ್ರೇಟರ್ ಗಳನ್ನು ಹಾರೋಹಳ್ಳಿ ಕೈಗಾರಿಕಾ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.
ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈವೇಟ್ ಲಿಮಿಟೆಡ್, ಸ್ಟವ್ ಕ್ರಾಪ್ಟ್ ಮೈಕ್ರೋ ಪ್ಲಾಸ್ಟಿಕ್ಸ್, ಸೆಂಟ್ ಗೋಬಿನ್ ಲಿಮಿಟೆಡ್ ಹಾಗೂ ಇತರೆ ಕೈಗಾರಿಕೆಗಳು ಸೇರಿ ,ಮೆಡಿಕಲ್ ಗ್ರೇಡ್ 5 ಐPಒ ವಿಥ್ 93% ಆಕ್ಸಿಜನ್ ಕಾನ್ಸಟರೇಷನ್ ಹೊಂದಿರುವ 30 ಸೆಟ್ ಆಕ್ಸಿಜನ್ ಕಾನ್ಸಟರೇಟರ್ ನೀಡಿರುತ್ತಾರೆ.
ಪ್ರತಿ ಸೆಟ್ ನ ವೆಚ್ಚ ರೂ 77200 ಆಗಿದ್ದು, ಒಟ್ಟು 23.16 ಲಕ್ಷ ರೂ ವೆಚ್ಚದ ಆಕ್ಸಿಜನ್ ಕಾನ್ಸಟರೇಟರ್ ಗಳನ್ನು ನೀಡಿರುತ್ತಾರೆ.
ಇದೇ ಸಂದರ್ಭದಲ್ಲಿ ಹರೋಹಳ್ಳಿ ಇಂಡಸ್ಟ್ರೀಯಲ್ ಅಸೋಷಿಯೇಷನ್ ಅಧ್ಯಕ್ಷ ಪ್ರಮೋದ್ ತಾಂತಿಯಾ, ಸ್ಟವ್ ಕ್ರಾಪ್ಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ಗಾಂಧಿ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎಲ್ ನಾಗರಾಜು, ಉಪನಿರ್ದೇಶಕ ಎಸ್. ಶಿವಲಿಂಗಯ್ಯ ಉಪಸ್ಥಿತರಿದ್ದರು.