ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಸಿಕ್ಕಿಂ ನ ಲಾಚುಂಗ್ ನಲ್ಲಿನ ಹಿಮಪಾತದಲ್ಲಿ ಸಿಲುಕಿದ್ದ ಕನಿಷ್ಠ 300 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್, ಹಿಮಪಾತದಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ರಕ್ಷಿಸಲಾಗಿದ್ದು, ಅವರಿಗೆ ಅಗತ್ಯವಿರುವ ವೈದ್ಯಕೀಯ ನೆರವು, ಬಿಸಿಯೂಟ ವ್ಯವಸ್ಥೆ ಹಾಗೂ ರಸ್ತೆ ತೆರೆಯುವಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಕಳೆದ ಶನಿವಾರ ಚೀನಾದ ಗಡಿ ಬಳಿ ಇರುವ ಸಿಕ್ಕಿಂನ ನಾಥುಲಾ, ತ್ಸೋಮ್ಗೋ ಸರೋವರ ಮತ್ತು ಇತರೆ ಪ್ರದೇಶಗಳಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು. 1,027 ಪ್ರವಾಸಿಗರನ್ನು ಸೇನೆ ರಕ್ಷಣೆ ಮಾಡಿತ್ತು.
#IndianArmy assisted 300 tourists stranded in heavy snowfall in Lachung, North Sikkim. Tourists were assisted through Road opening, medical aid and hot meals. #AmritMahotsav@adgpi@SpokespersonMoD pic.twitter.com/EjgeJAm4j8
— EasternCommand_IA (@easterncomd) December 29, 2021