Friday, August 19, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 318 ಮಂದಿ ಗುಣಮುಖ: 280 ಜನರಿಗೆ ಕೋವಿಡ್ ಸೋಂಕು ದೃಢ

ದಿಗಂತ ವರದಿ ಕಾಸರಗೋಡು:

ಜಿಲ್ಲೆಯಲ್ಲಿ ಗುರುವಾರ 280 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 200 ಜನರಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ಅಲ್ಲದೆ ಜಿಲ್ಲೆಯಲ್ಲಿ 318 ಮಂದಿ ಸೋಂಕುಮುಕ್ತರಾದರು. ಕೋವಿಡ್ ಬಾಧಿಸಿ ಜಿಲ್ಲೆಯಲ್ಲಿ ಗುರುವಾರ ಇಬ್ಬರು ಬಲಿಯಾಗಿದ್ದು , ಈ ಮೂಲಕ ಒಟ್ಟು ಸಂಖ್ಯೆ 503 ಕ್ಕೇರಿದೆ. ಇದೇ ವೇಳೆ ಕೇರಳದಲ್ಲಿ 22,182 ಜನರಿಗೆ ಹೊಸದಾಗಿ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 21,122 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 26,563 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ತೃಶೂರು ಜಿಲ್ಲೆಯಲ್ಲಿ 3252, ತಿರುವನಂತಪುರ 2135, ಮಲಪ್ಪುರಂ 2061, ಕಲ್ಲಿಕೋಟೆ 1792, ಪಾಲಕ್ಕಾಡು 1613, ಕೊಲ್ಲಂ 1520, ಆಲಪ್ಪುಳ 1442, ಕಣ್ಣೂರು 1246, ಕೋಟ್ಟಾಯಂ 1212, ಪತ್ತನಂತ್ತಿಟ್ಟ 1015, ಇಡುಕ್ಕಿ 973, ವಯನಾಡು 740, ಕಾಸರಗೋಡು ಜಿಲ್ಲೆಯಲ್ಲಿ 280 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಮಧ್ಯೆ ಕೇರಳದಲ್ಲಿ ಕೋವಿಡ್ ವೈರಸ್ ಬಾಧಿಸಿ ಗುರುವಾರ 178 ಮಂದಿ ಅಸುನೀಗಿದರು. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 23,165 ಜನರು ಸಾವಿಗೀಡಾದರು. ಕೇರಳದಲ್ಲಿ ಗುರುವಾರ ಕೊರೋನಾ ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ಶೇಕಡಾ 18.25 ರಷ್ಟು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!