ಹೊಸದಿಗಂತ ವರದಿ,ಮೈಸೂರು:
ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಎಸ್.ಎಫ್.ಸಿ ಶಾಸಕರ ವಿವೇಚನಾ ಅನುದಾನದಲ್ಲಿ ಹೈಟೆಕ್ ಮಾದರಿಯ ಬಸ್ ನಿಲ್ದಾಣ ಕಟ್ಟಡ ನಿರ್ಮಾಣದ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಸೋಮವಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಗರಪಾಲಿಕೆಯ ವಾರ್ಡ್ ನಂ.5 ರ ವ್ಯಾಪ್ತಿಗೆ ಬರುವ ಕುಂಬಾರಕೊಪ್ಪಲಿನಲ್ಲಿರುವ ಬಸ್ ನಿಲ್ದಾಣದಲ್ಲಿ ಹೈಟೆಕ್ ಮಾದರಿಯ ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 35 ಲಕ್ಷ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಇದರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಭಾ.ಜ.ಪ, ಅಧ್ಯಕ್ಷÀ ಸೋಮಶೇಖರರಾಜು, ಪ್ರಧಾನ ಕಾರ್ಯದರ್ಶಿಗಳಾದ ಪುನೀತ್ ರಮೇಶ್, ಉಪಾಧ್ಯಕ್ಷರಾದ ಕುಮಾರಗೌಡ, ಆಶ್ರಯ ಸಮತಿ ಸದಸ್ಯರಾದ ಮಹೇಶ್ ರಾಜೆಅರಸ್, ಬಸವೇಗೌಡ, ಚಿಕ್ಕವೆಂಕಟು, ಪ್ರಮೋದ್ ಯುವ ಮೋರ್ಚಾ ಉಪಾಧ್ಯಕ್ಷರು, ಮುಖಂಡರುಗಳಾದ ಭೈರಪ್ಪ, ಮಂಜಪ್ಪ, ಅಶ್ವಥ್, ಸತೀಶ್, ನವೀನ್, ಕೆ.ಟಿ.ಗಿರೀಶ್, ನರಸಿಂಹ, ಕಿರಣ್, ಮಾಜಿ ಮಹಾನಗರಪಾಲಿಕೆ ಸದಸ್ಯರಾದ ದೇವರಾಜು, ಯುವ ಮೋರ್ಚಾದ ಗೋವಿಂದು, ಪದ್ಮ, ಪದ್ಮಶ್ರೀ, ಶೋಭ, ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಮನುಗೌಡ, ಅಭಿಯಂತರರಾದ ಅಭಿಲಾಷ್, ಕೆ.ಎಸ್.ಆರ್.ಟಿ.ಸಿ, ಸಂಸ್ಥೆಯ .ಟಿ.ಓ, ಮರಿಗೌಡ, ಗುತ್ತಿಗೆದಾರರಾದ ಭೈರಪ್ಪ, ಮುಂತಾದವರು ಹಾಜರಿದ್ದರು,