35 ಲಕ್ಷ ಟನ್‌ ಗೋದಿ ರಫ್ತು ಒಪ್ಪಂದಕ್ಕೆ ಸಹಿ; ದುಪ್ಪಟ್ಟಾಗಲಿದೆ ಭಾರತದ ಗೋದಿ ರಫ್ತು ಪ್ರಮಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಸಕ್ತ ವರ್ಷದ ಏಪ್ರಿಲ್ ಮತ್ತು ಜುಲೈನಲ್ಲಿ 30-35 ಲಕ್ಷ ಟನ್ ಗೋಧಿ ರಫ್ತು ಮಾಡಲು ವ್ಯಾಪಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸರಕುಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದ ಗೋಧಿ ರಫ್ತು 2020-21ರಲ್ಲಿ 21.55 ಲಕ್ಷ ಟನ್‌ ಇತ್ತು, ಅದು ಈ ಬಾರಿ ದುಪ್ಪಟ್ಟಾಗಲಿದೆ ಎಂದಿದ್ದಾರೆ. ಬರೋಬ್ಬರಿ ಈ ವರ್ಷ 2021-22ರಲ್ಲಿ 70 ಲಕ್ಷ ಟನ್‌ಗಳನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.
ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಹಾಗೂ ಪಾಶ್ಚಿಮಾತ್ಯ ನಿರ್ಬಂಧದ ಬಳಿಕ ಅನೇಕ ದೇಶಗಳು ಭಾರತ ಮತ್ತು ಇತರ ದೇಶಗಳಿಂದ ಗೋಧಿಯನ್ನು ಆಮದು ಮಾಡಿಕೊಳ್ಳಲು ಇಚ್ಚಿಸುತ್ತಿವೆ. ಈ ನಿಟ್ಟಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಾಗಿ ಭಾರತ ಸರ್ಕಾರವು ಗೋಧಿ ರಫ್ತು ಹೆಚ್ಚು ಮಾಡಲು ಯೋಜಿಸಿದೆ. ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳು ಬಂದರುಗಳಿಗೆ ಹತ್ತಿರವಾಗಿರುವುದರಿಂದ ಮತ್ತು ಸುಲಭವಾದ ಲಾಜಿಸ್ಟಿಕ್ಸ್‌ನಿಂದ ಗರಿಷ್ಠ ಪ್ರಮಾಣದ ಗೋಧಿಯನ್ನು ಸಾಗಿಸಬಹುದು ಎಂದಿದ್ದಾರೆ.
ಬೆಲೆ ಏರಿಕೆಯಿಂದಾಗಿ ಖಾಸಗಿ ವ್ಯಾಪಾರಿಗಳು ಗೋಧಿ ಸಂಗ್ರಹಣೆಗಿಳಿದರೆ, ಸರ್ಕಾರಿ ಸಂಗ್ರಹಣೆಯಲ್ಲಿ ಕುಸಿತವಾಗಬಹುದು ಈ ಬಗ್ಗೆ ಸರ್ಕಾರ ಕಾಲಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂಬ ಮಾತನ್ನು ಹೇಳಿದರು. 2022-23ರ ಆರ್ಥಿಕ ವರ್ಷದಲ್ಲಿ ದೇಶದ ಗೋಧಿ ರಫ್ತು 100 ಲಕ್ಷ ಟನ್‌ಗಳನ್ನು ದಾಟಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕಳೆದ ವಾರವಷ್ಟೇ ಗೋಧಿ ರಫ್ತಿನ ಬಗ್ಗೆ ಮಾತನಾಡಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!