Wednesday, August 10, 2022

Latest Posts

ಚೀನಾದಿಂದ ದೆಹಲಿಗೆ ಬಂತು 3,600 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ವಿರುದ್ಧ ಭಾರತದ ಹೋರಾಟದಲ್ಲಿ ಹಲವು ರಾಷ್ಟ್ರಗಳು ಸಾಥ್ ನೀಡಿದ್ದು, ಇದೀಗ ಚೀನಾ ಗರಿಷ್ಠ ಮಟ್ಟದ ಆಕ್ಸಿಜನ್ ಸಾಂದ್ರಕಗಳನ್ನು ಪೂರೈಕೆ ಮಾಡಿದೆ. ಸುಮಾರು 100 ಟನ್ ತೂಕದ 3600 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಭಾರತಕ್ಕೆ ಬಂದಿದ್ದು, ಒಂದು ಬಾರಿ ಭಾರತಕ್ಕೆ ಬಂದಿಳಿದ ಗರಿಷ್ಠ ಆಕ್ಸಿಜನ್ ಇದಾಗಿದೆ.
ಚೀನಾದ ಹ್ಯಾಂಗ್‌ ಝೌ ವಿಮಾನ ನಿಲ್ದಾಣದಿಂದ ಬೋಯಿಂಗ್ 747-400 ವಿಮಾನ ಮೂಲಕ ದೆಹಲಿಗೆ ಬಂದಿಳಿದೆ. ಬಹುರಾಷ್ಟ್ರೀಯ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯಾದ ಬೊಲ್ಲೂರ್ ಲಾಜಿಸ್ಟಿಕ್ಸ್ ಇಂಡಿಯಾ ಈ ಆಮದಿನ ನೇತೃತ್ವ ವಹಿಸಿಕೊಂಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss