ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 363 ಮಂದಿಗೆ ಕೊರೋನಾ ಪಾಸಿಟಿವ್, ಆರು ಸೋಂಕಿತರು ಸಾವು

ಹೊಸದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 363 ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಸೋಮವಾರ ಒಂದೇ ದಿನ ಆರು ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆ.
816 ಮಂದಿ ಗುಣಮುಖರಾಗಿದ್ದಾರೆ. ಮೃತ ಆರು ಮಂದಿಯ ಪೈಕಿ ಮೂವರು ಮಂಗಳೂರು ತಾಲೂಕಿನವರು, ಉಳಿದ ಮೂವರು ಹೊರಜಿಲ್ಲೆಯ ನಿವಾಸಿಗಳು. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 5.67 ದಾಖಲಾಗಿದೆ. ಜಿಲ್ಲೆಯಲ್ಲಿ ಸೋಮವಾರ ಒಂದು ಕ್ಲಸ್ಟರ್ ಪ್ರಕರಣ ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 132537ಕ್ಕೆ ಏರಿಕೆಯಾಗಿದೆ. ಈ ಪೈಕಿ 3954 ಸಕ್ರಿಯ ಪ್ರಕರಣಗಳು. 126824 ಮಂದಿ ಗುಣಮುಖರಾಗಿದ್ದಾರೆ. 1757 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!