ಹೊಸದಿಗಂತ ವರದಿ, ಕಲಬುರಗಿ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 36ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಫಲಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ನಗರದ ಶ್ರೀ ಬಸವರಾಜಪ್ಪ ಅಪ್ಪಾ ಸಭಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿದೆ. ಪತ್ರಕರ್ತರ ಸಮ್ಮೇಳನದಲ್ಲಿ ಜಿಲ್ಲೆಯ ತೋಟಗಾರಿಕೆ ಇಲಾಖೆ ವತಿಯಿಂದ ಈ ಫಲ ಪುಷ್ಪ ಪ್ರದರ್ಶನ ಮಾಡಲಾಗಿದ್ದು, ಸಭಾಂಗಣದ ಪ್ರವೇಶಕ್ಕೂ ಮುನ್ನವೇ ಈ ಫಲ ಪುಷ್ಪ ಪ್ರದರ್ಶನ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಇನ್ನೂ ಸಮ್ಮೇಳನದಲ್ಲಿ ವಿವಿಧ ರಾಜ್ಯ ಮಟ್ಟದ ಪತ್ರಿಕೆ, ಪ್ರಾದೇಶಿಕ ಪತ್ರಿಕೆ ಹಾಗೂ ಸ್ಥಳೀಯ ಪತ್ರಿಕೆಗಳ ಕಟಿಂಗ್ ಗಳನ್ನು ಅಂಟಿಸಿ, ಪ್ರದರ್ಶನ ಮಾಡಲಾಗಿದೆ.
ಸಮ್ಮೇಳನದ ಸಭಾಂಗಣದಲ್ಲಿ ಹಲವರು ಹೊಸದಿಗಂತ ಪತ್ರಿಕೆಯ ಸುದ್ದಿಗಳನ್ನು ಓದುತ್ತಿರುವುದು ಕಂಡುಬಂದಿದೆ.