Friday, August 12, 2022

Latest Posts

93 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಡೆ: ಮಕ್ಕಳು ಸೇರಿದಂತೆ 39 ಆಫ್ರಿಕನ್ ವಲಸಿಗರ ಸಾವು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಟ್ಯೂನಿಷಿಯಾ ಸಮುದ್ರದಲ್ಲಿ 93 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಡೆಯಾಗಿದ್ದು, ಮಕ್ಕಳು ಸೇರಿದಂತೆ 39 ಆಫ್ರಿಕನ್ ವಲಸಿಗರು ಮೃತಪಟ್ಟಿದ್ದಾರೆ.

ಮಂಗಳವಾರ ಮುಂಜಾನೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಈ ಬಗ್ಗೆ ಟ್ಯುನಿಷಿಯಾದ ರಕ್ಷಣಾ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ದಕ್ಷಿಣ ಟ್ಯುನಿಷಿಯಾದ ಮೆಡಿಟರೇನಿಯನ್ ಬಂದರು ನಗರ ಸ್ಫಾಕ್ಸ್ ನ ಸಮುದ್ರಪ್ರದೇಶದಲ್ಲಿ ಆಫ್ರಿಕನ್ ವಲಸಿಗರ ಮೃತ ದೇಹಗಳು ಪತ್ತೆಯಾಗಿದೆ. ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯ ತಂಡಗಳು ಮತ್ತು ಸ್ವಯಂ ಪ್ರೇರಿತ ಮೀನುಗಾರಿಕಾ ದೋಣಿಗಳು ಮೃತದೇಹಗಳನ್ನು ಪತ್ತೆ ಹಚ್ಚಿ, ಎರಡೂ ಹಡಗುಗಳಿಂದ ಒಟ್ಟು 165 ವಲಸಿಗರನ್ನು ರಕ್ಷಿಸಿವೆ. ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿಸಿದೆ.

ದುರಂತಕ್ಕಿಡಾದ ದೋಣಿ ಇಟಲಿಗೆ ತೆರಳುತ್ತಿತ್ತು. ಈ ದೋಣಿ ಶಿಥಿಲಾವಸ್ಥೆಯಲ್ಲಿದ್ದು, ಓವರ್ ಲೋಡ್ ಆಗಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಜೆಬಬ್ಲಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss