ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಅಗ್ನಿ ಅವಘಡ: 39 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಮೆಕ್ಸಿಕೋದ ಸಿಯುಡಾಡ್ ಜುವಾರೆಜ್‌ನಲ್ಲಿರುವ ಸರ್ಕಾರಿ ವಲಸಿಗರ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 39 ಮಂದಿ ಸಾವನ್ನಪ್ಪಿರುವುದಾಗಿ ಅಧ್ಯಕ್ಷ ಆಂಡ್ರೆಸ್‌ ಮ್ಯಾನುಯೆಲ್‌ ಲೋಪೆಜ್‌ ಒಬ್ರಡಾರ್‌ ಖಚಿತಪಡಿಸಿದ್ದಾರೆ.

ಅಕ್ರಮ ವಲಸೆಗಾರರನ್ನು ಗಡಿಪಾರು ಮಾಡುವ ಭಯದಿಂದ ಬಂಧಿತರು ಈ ಕೃತ್ಯವೆಸಗಿದ್ದಾರೆ ಎಂದು ಅಧ್ಯಕ್ಷರು ಹೇಳಿದ್ದಾರೆ.

ಯುನೈಟೆಡ್‌ ಸ್ಟೇಟ್ಸ್‌ ಗಡಿಯಲ್ಲಿರುವ ಉತ್ತರ ರಾಜ್ಯ ಚಿಹೋವಾದಲ್ಲಿನ ಸಿಯುಡಾಡ್‌ ಜುವಾರೆಜ್‌ನಲ್ಲಿರುವ ತಾತ್ಕಾಲಿಕ ವಲಸೆ ಕೇಂದ್ರದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿತ್ತು.

ವಲಸಿಗರು ಮಧ್ಯ ಅಮೇರಿಕಾ ಮತ್ತು ವೆನೆಜುವೆಲಾದಿಂದ ಬಂದವರು ಎಂದು ಅಧ್ಯಕ್ಷರು ಹೇಳಿದರು. ಅಧಿಕಾರಿಗಳು ಸತ್ತವರ ಗುರುತುಗಳನ್ನು ಇನ್ನೂ ಪತ್ತೆಹಚ್ಚಿಲ್ಲ. ಅಟಾರ್ನಿ ಜನರಲ್‌ ಕಚೇರಿಯು ಸಂಬಂಧಿತ ತನಿಖೆಯನ್ನು ಪ್ರಾರಂಭಿಸಿದೆ ಎಂದು ಲೋಪೆಜ್‌ ಒಬ್ರಡಾರ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!