ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಬಳಿಕ ಅತಿ ಹೆಚ್ಚು ಯಾತ್ರಿಕರು ಭೇಟಿ ನೀಡುತ್ತಿರುವ ಕ್ಷೇತ್ರಗಳಲ್ಲಿ ತಿರುಪತಿ ತಿಮ್ಮಪ್ಪನ ದೇಗುಲವೂ ಒಂದು.
ಈಗ ತಿರುಪತಿ ತಿರುಮಲ ದೇವಸ್ಥಾನ ಕೇವಲ 80 ನಿಮಿಷಗಳಲ್ಲಿ ಬರೋಬ್ಬರಿ 4.6 ಲಕ್ಷ ದರ್ಶನ ಟಿಕೆಟ್ ಬಿಕ್ಕಿಂಗ್ ಪಡೆಯುವ ಮೂಲಕ ದಾಖಲೆ ಮಾಡಿದೆ. ಹೌದು, 2022ರ ಜನವರಿಯಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಜನ ಕಾಯುತ್ತಿದ್ದು, ಇದರಿಂದ ಆನ್ ಲೈನ್ ನಲ್ಲಿ ಬಿಡುಗಡೆಯಾದ ಟಿಕೆಟ್ ಕೇವಲ 80 ನಿಮಿಷದಲ್ಲಿ ಖಾಲಿಯಾಗಿದೆ.
ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಆನ್ ಲೈನ್ ಮೂಲಕ ಬಿಡುಗಡೆ ಮಾಡಿದ ವಿಶೇಷ ದರ್ಶನದ ಟಿಕೆಟ್ ಗಳ ವಿವರ ಹೀಗಿವೆ.. ಜ.13ರಿಂದ 22ರವರೆಗೆ ವೈಕುಂಠ ಏಕಾದಶಿ ಇರುವ ಕಾರಣ 5 ಸಾವಿರ ರೂ. ಗಳ 5000 ಟಿಕೆಟ್ ಪ್ರತಿದಿನಕ್ಕೆ ಕೊಡಲಿದೆ. ಉಳಿದಂತೆ ದಿನಕ್ಕೆ 10ಸಾವಿರ ಟಿಕೆಟ್ ನೀಡಲಿದೆ. ಡಿ.28ರಿಂದ ವಸತಿಗಾಗಿ ಬುಕ್ ಮಾಡಲು ಅವಕಾಶ ನೀಡಲಾಗುತ್ತದೆ. ಉಚಿತ ಸರ್ವ ದರ್ಶನಕ್ಕೆ ಡಿ.27ರಿಂದ ಬುಕ್ಕಿಂಗ್ ಮಾಡಿಕೊಳ್ಳುವ ಅವಕಾಶವಿದೆ ಎಂದು ಟಿಟಿಡಿ ತಿಳಿಸಿದೆ.