Wednesday, August 10, 2022

Latest Posts

4.7 ದಶಲಕ್ಷ ಮಂದಿ ಸೋಂಕಿನಿಂದ ಪರಿತಪಿಸಿದ್ದಾರೆ, ಕೊವೀಡ್ ಮೂಲ ಹುಡುಕಿ: ವಿಶ್ವ ಆರೋಗ್ಯ ಸಂಸ್ಥೆಗೆ ಭಾರತ ಆಗ್ರಹ

ಹೊಸದಿಲ್ಲಿ: ಕೊರೋನಾ ಮಹಾಮಾರಿಯ ರುದ್ರನರ್ತನದ ನಡುವೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸೋಮವಾರದಿಂದ ಸದಸ್ಯ ದೇಶಗಳ ಎರಡು ದಿನಗಳ ಸಮಾವೇಶ ಆರಂಭವಾಗಲಿದೆ. ಇದೇ ವೇಳೆ ಕೊರೋನಾ ಹುಟ್ಟುಪೂರ್ವಗಳ ಬಗ್ಗೆ ಕಾಲಮಿತಿಯೊಳಗೆ ಸ್ವತಂತ್ರ ಮೌಲ್ಯಮಾಪನ ನಡೆಸಲು ಭಾರತ ಆಗ್ರಹಿಸಿದೆ.
ಇಂದಿನಿಂದ ಎರಡು ದಿನಗಳ ಸಮಾವೇಶ
73 ನೆಯ ಅಧಿವೇಶನದಲ್ಲಿ 128 ಕ್ಕೂ ಅಧಿಕ ದೇಶಗಳಲ್ಲಿ ತಾಂಡವವಾಡುತ್ತಿರುವ ಮಹಾಮಾರಿಯೇ ಪ್ರಧಾನ ವಿಷಯವಾಗಗಲಿದ್ದು ಅಮೆರಿಕ ಹಾಗೂ ಚೀನಾ ನಡುವೆ ಮಾತಿನ ಜಟಾಪಟಿಯೂ ನಿರೀಕ್ಷಿಸಲಾಗಿದೆ. ಆದರೆ ಇವರಿಬ್ಬರ ನಡುವಣ ಕೋಪಾವೇಶವು ಈ ಸಭೆಯಲ್ಲಿ ಸ್ಪೋಟಗೊಳ್ಳದಂತೆ ವಿಶ್ವ ಆರೋಗ್ಯ ಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಡೆಟ್ರಾಸ್ ಅದ್ನಾನ್ ಗ್ಯಾಬ್ರಿಷಿಯಸ್ ಸಂಧಾನದ ಹಾದಿ ಹಿಡಿದಿದ್ದಾರೆ. ನಿತ್ಯವೂ ಚೀನಾ ಮತ್ತು ಅಮೆರಿಕ ನಡುವೆ ವಾಕ್‌ಸಮರ ಮುಂದುವರಿದಿದ್ದು, ಇದು ಎರಡೂ ರಾಷ್ಟ್ರಗಳ ನಡುವಣ ಅಂತಾರಾಷ್ಟ್ರೀಯ ಎಲ್ಲ ಸಂಬಂಧಗಳನ್ನು ಕಡಿದು ಹಾಕಿದೆ.
ಭಾರತವೂ ಈಗ ಯೂರೋಪಿಯನ್ ಒಕ್ಕೂಟದ 27 ದೇಶಗಳ ಜೊತೆ ಸೇರಿದ್ದು ಕೊರೋನಾ ವಿಚಾರದಲ್ಲಿ ಲೋಪವಾಗಿದ್ದೆಲ್ಲಿ ಎಂದು ಪ್ರಶ್ನಿಸಿದೆ. ಯೂರೋಪಿಯನ್ ಒಕ್ಕೂಟವಲ್ಲದೆ ಪ್ರಪಂಚದ ಇನ್ನೂ ೩೪ ದೇಶಗಳು ಕೊರೋನಾ ಮೊದಲು ಜನತಾಳಿದ್ದುಎಲ್ಲಿ ಎಂದು ಪ್ರಶ್ನಿಸಿದ್ದು ಈ ದೇಶಗಳೂ ಈಗ ಯೂರೋಪಿಯನ್ ಒಕ್ಕೂಟವನ್ನು ಸೇರಿಕೊಂಡಿವೆ.
ಮೊದಲ ಭಾರಿಗೆ ಚೀನಾ ದೇಶದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಂಡ ಈ ಸೋಂಕು, ಇದುವರೆಗೆ ಪ್ರಪಂಚದಾದ್ಯಂತ ಒಟ್ಟು ಮೂರು ಲಕ್ಷ ಮಂದಿಯನ್ನು ಬಲಿತೆಗೆದುಕೊಂಡಿದ್ದರೆ, 4.7 ದಶಲಕ್ಷ ಮಂದಿ ಸೋಂಕಿನಿಂದ ಪರಿತಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss