spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾಲ್ವರು ದ್ವಿಚಕ್ರ ವಾಹನ ಕಳ್ಳರ ಬಂಧನ: 26 ಬೈಕ್‌ಗಳು ವಶಕ್ಕೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮಂಡ್ಯ:

ನಾಲ್ವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಪೊಲೀಸರು ಅವರಿಂದ 12 ಲಕ್ಷ ರೂ. ವೌಲ್ಯದ 26 ಬೈಕ್‌ಗಳು, 2 ಲಕ್ಷ ರೂ. ವೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ದುದ್ದ ಹೋಬಳಿ, ತಿಬ್ಬನಹಳ್ಳಿ ಗ್ರಾಮದ ಜೆ.ಎನ್. ಯತಿನ್ (25), ಜೆ.ಎನ್. ವಿಜಯಕುಮಾರ್ (30), ಜೆ.ಸಿ. ಕಾರ್ತಿಕ್ (24) ಹಾಗೂ ಜಯಪುರ ಗ್ರಾಮದ ಜೆ.ಎನ್. ಶಿವಕುಮಾರ್ (29) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಪಶ್ಚಿಮ ಠಾಣೆಯ ಪಿಎಸ್‌ಐ ವಾಹನ ತಪಾಸಣೆ ನಡೆಸಿದ ವೇಳೆ ಜೆ. ನಿತಿನ್, ಜೆ.ಎನ್. ವಿಜಯಕುಮಾರ್, ಜೆ.ಸಿ. ಕಾರ್ತಿಕ್ ಅವರು ಕದ್ದ ಬೈಕ್ ಸಮೇತ ಸಿಕ್ಕಿಕೊಳ್ಳಲಾಗಿ ವಿಚಾರಣೆ ಸಂದರ್ಭ ಬೈಕ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿರುತ್ತಾರೆ ಎಂದರು.
ಈ ಮೂವರನ್ನು ಹೆಚ್ಚಿನ ವಿಚಾರಣೆಗಾಗಿ ಒಳಪಡಿಸಿದಾಗ 18 ಹೀರೋ ಸ್ಲ್ಪೆಂಡರ್, ಸ್ಪ್ಲೆಂಡರ್ ಪ್ಲಸ್, 6 ಹೀರೋ ್ಯಾಷನ್ ಪ್ರೋಘಿ, 1 ಬಜಾಜ್ ಪಲ್ಸರ್, 1 ಬಜಾಜ್ ಪ್ಲಾಟಿನಂ ಬೈಕ್‌ನ್ನು ಕದ್ದಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅಲ್ಲದೆ, ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಯಪುರ ಗ್ರಾಮದಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಜೆ.ಎನ್. ಶಿವಕುಮಾರ್ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ.
ನಂತರದಲ್ಲಿ ಶಿವಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ 18 ಗ್ರಾಂ ಚಿನ್ನದ ಚೈನ್, 2 ಉಂಗುರ, 1 ಬ್ರಾಸ್‌ಲೇಟ್ ಸೇರಿ ಒಟ್ಟು 42 ಗ್ರಾಂ ತೂಕದ ಸುಮಾರು 2,01,600 ರೂ. ವೌಲ್ಯದ ಚಿನ್ನಾಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಎಎಸ್ಪಿ ಧನಂಜಯ, ಡಿವೈಎಸ್ಪಿಗಳಾದ ಮಂಜುನಾಥ್, ವಿರೂಪಾಕ್ಷೇಗೌಡ ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss