spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಯನಾಡಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ: ಕರಪತ್ರ ಹಂಚಿ ಕೇರಳ ಮುಖ್ಯಮಂತ್ರಿಗೆ ಬೆದರಿಕೆಯೊಡ್ಡಿದ ಮಾವೋವಾದಿಗಳು

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಾಸರಗೋಡು:

ವಯನಾಡು ಜಿಲ್ಲೆಯ ತೊಂಡರ್ನಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪೆರಿಂಚೆರ್ಮಲ ಬುಡಕಟ್ಟು ಕಾಲನಿಗೆ ನಾಲ್ಕು ಮಂದಿ ಸದಸ್ಯರಿದ್ದ ಸಶಸ್ತ್ರ ನಕ್ಸಲ್ ಗುಂಪೊಂದು ಭೇಟಿ ನೀಡಿರುವುದಾಗಿ ಕಾಲನಿ ನಿವಾಸಿಗಳು ಹೇಳಿದ್ದಾರೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದ ಗುಂಪು ಭೇಟಿ ನೀಡಿದೆ ಎಂದು ಕಾಲನಿ ನಿವಾಸಿಗಳು ತಿಳಿಸಿದ್ದಾರೆ.
ನಕ್ಸಲ್ ತಂಡ ಕಾಲನಿಯ 2 ಮನೆಗಳಿಗೆ ನುಗ್ಗಿ ಘೋಷಣೆಗಳನ್ನು ಕೂಗಿದೆ ಮತ್ತು ಕರಪತ್ರಗಳನ್ನು ಹಂಚಿದೆ. ಈ ಪ್ರದೇಶದ ವಿದ್ಯುತ್ ಕಂಬಗಳಿಗೆ ಪೋಸ್ಟರ್‌ಗಳನ್ನು ಅಂಟಿಸಿದ ನಂತರ ಗುಂಪು ಅರಣ್ಯದೊಳಗೆ ತೆರಳಿ ಮರೆಯಾಯಿತು ಎಂದು ತಿಳಿದುಬಂದಿದೆ. ಪೋಸ್ಟರ್‌ಗಳಲ್ಲಿ ಜುಲೈ 28ರಿಂದ ಆಗಸ್ಟ್ 3ರ ವರೆಗೆ ಹುತಾತ್ಮರ ವಾರಾಚರಣೆ ಮತ್ತು ಕೇರಳ ಸರಕಾರಕ್ಕೆ ಕಠಿಣ ಸಂದೇಶಗಳನ್ನು ಬರೆಯಲಾಗಿದೆ. ಪಿಣರಾಯಿ ವಿಜಯನ್ ನೀವು ಕೇರಳದಲ್ಲಿ ಅತ್ಯಂತ ನರಭಕ್ಷಕ ಮುಖ್ಯಮಂತ್ರಿ. ಇನ್ನು ಮುಂದೆ ನಿಮ್ಮನ್ನು ಯಾರೂ ಸಾಮಾಜಿಕ ಫ್ಯಾಸಿಸ್ಟ್ ಅಥವಾ ಕಿಡಿಗೇಡಿ ಮೋದಿ ಎಂದು ಕರೆಯುವುದಿಲ್ಲ. ನೀವು ಸಾವಿನ ವ್ಯಾಪಾರಿಯಾಗಿದ್ದು , ಇನ್ನು ಮುಂದೆ ನಿಮ್ಮ ಆಟ ನಡೆಯಲಾರದು ಎಂದು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪೋಸ್ಟರ್‌ಗಳು ಸಿಪಿಐ – ಮಾವೋವಾದಿ ಬಾಣಾಸುರ ಪ್ರದೇಶ ಸಮಿತಿಯ ಹೆಸರಿನಲ್ಲಿದೆ. ಪೊಲೀಸ್ ಥಂಡರ್ ಬೋಲ್ಟ್ ತಂಡವು ಸ್ಥಳಕ್ಕೆ ಆಗಮಿಸಿ ಸಮಗ್ರ ತನಿಖೆ ಕೈಗೊಂಡಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss