ಅಮೆರಿಕಾದಲ್ಲಿ ಓರ್ವ ವ್ಯಕ್ತಿಯಿಂದ ಗುಂಡಿನ ದಾಳಿ: ನಾಲ್ವರು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಂಡಿನ ದಾಳಿಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿರುವ ಘಟನೆ ಅಮೆರಿಕದಲ್ಲಿ ಓಹಿಯೋದ ಬಟ್ಲರ್ ಟೌನ್‌ಶಿಪ್‌ನಲ್ಲಿ ನಡೆದಿದೆ. ಗುಂಡು ಹಾರಿಸಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ಇಂದು ಬೆಳಗ್ಗೆ ತಿಳಿಸಿದ್ದಾರೆ. ಸ್ಟೀಫನ್ ಮಾರ್ಲೋ ಎಂಬ ವ್ಯಕ್ತಿ ಶೂಟೌಟ್‌ನಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಬಟ್ಲರ್ ಟೌನ್‌ಶಿಪ್ ಪೊಲೀಸ್ ಅಧಿಕಾರಿ ಜಾನ್ ಪೋರ್ಟರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರೋಪಿ 39 ವರ್ಷ ವಯಸ್ಸಿನವನಾಗಿದ್ದು, ಕಂದು ಬಣ್ಣದ ಕೂದಲು ಮತ್ತು 2007 ರ ಫೋರ್ಡ್ ಎಡ್ಜ್‌ ಕಾರಿನಲ್ಲಿ ಪಲಾಯನ ಮಾಡಿದ್ದಾನೆ. ಆತನ ಬಳಿ ಆಯುಧಗಳಿದ್ದು, ಆ ವ್ಯಕ್ತಿ ತುಂಬಾ ಅಪಾಯಕಾರಿಯಾಗಿ ಎಂದು ವಿವರಿಸಿದರು. ಈತನ ಬಗ್ಗೆ ಯಾರಿಗಾದರೂ ತಿಳಿದಿದ್ದರೆ, ತಕ್ಷಣ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದ್ದಾರೆ.

ಈ ಗುಂಡಿನ ದಾಳಿಯ ಹಿಂದೆ ಏನಾದರೂ ಉದ್ದೇಶವಿದೆಯೇ? ಅಥವಾ ಆತನ ಮನಸ್ಥಿತಿ ಸರಿ ಇದ್ಯಾ..ಇಲ್ಲವಾ? ಆ ವಿಷಯಗಳ ಬಗ್ಗೆ ವಿಚಾರಿಸುತ್ತಿದ್ದೇವೆ. ಆರೋಪಿಯನ್ನು ಬಂಧಿಸಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಅಮೆರಿಕದಲ್ಲಿ ಗುಂಡಿನ ದಾಳಿಯ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!