ಜೋಶಿಮಠದ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ: ವಿಪತ್ತು ನಿರ್ವಹಣಾ ಪಡೆ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರಾಖಂಡದ ಜೋಶಿಮಠದ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ ಎಂದು ವಿಪತ್ತು ನಿರ್ವಹಣಾ ಪಡೆ ಮಂಗಳವಾರ ಘೋಷಣೆ ಮಾಡಿದೆ.

ಜೋಶಿಮಠದಲ್ಲಿ ಕಳೆದ ಹಲವು ದಿನಗಳಿಂದ ಭೂಕುಸಿತ ಮತ್ತು ಕಟ್ಟಡಗಳಲ್ಲಿನ ಬಿರುಕುಗಳು ಆಗುತ್ತಿದ್ದು, ಇದೀಗ ಕೇಂದ್ರ ವಿಪತ್ತು ನಿರ್ವಹಣಾ ಪಡೆ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ ಎಂದು ಹೇಳಿದೆ.

ಈ ಬಗ್ಗೆ ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಅವರು ಮಾಹಿತಿ ನೀಡಿದ್ದು, ಪವಿತ್ರ ಪಟ್ಟಣದಲ್ಲಿ ನಾಲ್ಕು ಪುರಸಭೆಯ ಪ್ರದೇಶಗಳು ಅಥವಾ ವಾರ್ಡ್ಗಳು ಸಂಪೂರ್ಣ ಅಸುರಕ್ಷಿತ ಎಂದು ತಿಳಿಸಿದ್ದಾರೆ.

ಜೋಶಿಮಠ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಸಿತದ ಕಾರಣಗಳು ಮತ್ತು ವ್ಯಾಪ್ತಿಯ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಅನೇಕ ಸಂಸ್ಥೆಗಳು ತೊಡಗಿಸಿಕೊಂಡಿವೆ. ನಾವು ಶೀಘ್ರದಲ್ಲೇ ಅಂತಿಮ ವರದಿಯನ್ನು ನೀಡುತ್ತೇವೆ. ನಾವು ಮಳೆಯ ನಿರೀಕ್ಷೆಯಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.

ಅದೇ ರೀತಿ ಜೋಶಿಮಠದ ಜೆಪಿ ಕಾಲೋನಿಯಲ್ಲಿ ನೀರು ಬಿಡುವ ಮಟ್ಟ ಕಡಿಮೆಯಾಗಿದೆ. ಸಂತ್ರಸ್ತ ಕುಟುಂಬಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದ್ದು, ಒಂದು ವಾರದಲ್ಲಿ ಮಾದರಿ ಗುಡಿಸಲುಗಳು ಸಿದ್ಧಗೊಳ್ಳಲಿವೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!