ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ರತಿಯೊಬ್ಬ ವ್ಯಕ್ತಿಯು ತಪ್ಪು ಮಾಡುವುದು ಸಹಜ. ಆದರೆ ಕೆಲವರಿಗೆ ಮಾಡಿದ ತಪ್ಪುಗಳು ನಮ್ಮ ಜೀವನದ ಉದ್ದಕ್ಕೂ ಕಾಡುತ್ತವೆ, ಇನ್ನು ಕೆಲವರಿಗೆ ಅದರ ಕ್ಯಾರೇ ಇರಲ್ಲ. ಇಂತಹ ಸನ್ನಿವೇಶ ಮ್ಯಾಸಚೂಸೆಟ್ಸ್ ಪಟ್ಟಣದ ಓರ್ವ ವ್ಯಕಿಯ ಜೀವವನದಲ್ಲಿ ನಡೆದಿದೆ.
ಹೌದು, ಆತ 40 ವರ್ಷಗಳ ಹಿಂದೆ ಕ್ರಾಂತಿಕಾರಿ ಯುದ್ಧದಲ್ಲಿ ಭಾಗಿಯಾಗಿದ್ದ ಜನರಲ್ ಪ್ರತಿಮೆಯಿಂದ ಖಡ್ಗವನ್ನು ಕದಿದ್ದ. ಆದರೆ ಆತ ಈಗ ಆ ಖಡ್ಗವನ್ನು ಮತ್ತೆ ಹಿಂದಿರುಗಿಸಿದ್ದಾನೆ. ಜೊತೆಗೆ ತಮ್ಮ ಕಳ್ಳತನದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮ್ಯಾಸಚೂಸೆಟ್ಸ್ ಪಟ್ಟಣದ ಐತಿಹಾಸಿಕ ಆಯೋಗದ ಮುಖ್ಯಸ್ಥರಿಗೆ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ವೆಸ್ಟ್ ಫೀಲ್ಡ್ನ ಐತಿಹಾಸಿಕ ಆಯೋಗದ ಅಧ್ಯಕ್ಷರಾದ ಸಿ.ಡಿ ಪಿ. ಗೇರ್ಲಾಡ್ , 1980ರಲ್ಲಿ ಪಟ್ಟಣದಲ್ಲಿದ್ದ ಜನರಲ್ ವಿಲಿಯಂ ಶೆಪರ್ಡ್ ಪ್ರತಿಮೆಯಿಂದ ಖಡ್ಗವನ್ನು ಕಳವು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕಳವು ಮಾಡಿದ ವ್ಯಕ್ತಿ ವೆಸ್ಟ್ಫೀಲ್ಡ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ವೇಳೆ ಪಟ್ಟಣದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಒಂದು ರಾತ್ರಿ ಪಾನಮತ್ತರಾಗಿದ್ದಾಗ ಈತ ಹಾಗೂ ಸ್ನೇಹಿತರ ಗುಂಪು ಈ ಖಡ್ಗವನ್ನು ಕಳುವು ಮಾಡಿದ್ದರು. ಮಾರನೇ ದಿನವೇ ಮಾಡಿದ ತಪ್ಪಿನ ಅರಿವಾಗಿದ್ದರೂ ಸಹ ಖಡ್ಗವನ್ನು ಹಿಂದಿರುಗಿಸಿದರೆ ಶಿಕ್ಷೆಯಾಗಬಹುದೆಂಬ ಭಯ ಹೊಂದಿದ್ದರು.