ದೇಶದಲ್ಲಿ ಕೊರೋನಾದಿಂದ 41 ಲಕ್ಷ ಜನರು ಸಾವು: ಲ್ಯಾನ್ಸೆಟ್​ ಜರ್ನಲ್​ ವರದಿ ಸುಳ್ಳು ಎಂದ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊರೋನಾದಿಂದ ಭಾರತದಲ್ಲಿ ಈವರೆಗೆ 41 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂಬ ಲ್ಯಾನ್ಸೆಟ್​ ಜರ್ನಲ್​ ವರದಿಯನ್ನು ಭಾರತ ತಳ್ಳಿಹಾಕಿದ್ದು, ಈ ವರದಿ ಸಂಪೂರ್ಣ ‘ಊಹಾತ್ಮಕ’ ಮತ್ತು ‘ತಪ್ಪು ಮಾಹಿತಿ’ ನೀಡಿದೆ ಎಂದು ಟೀಕಿಸಿದೆ.
ಈ ವರದಿಯ ಲೆಕ್ಕಾಚಾರ ಕೇವಲ ಒಂದು ಊಹೆಯಾಗಿದ್ದು, ಇಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿದೆ ಎಂದು ವರದಿಯಲ್ಲಿನ ಅಂಶಗಳನ್ನು ಸುಳ್ಳು ಎಂದಿದೆ.
ವಿಶ್ವದಲ್ಲಿ 18.2 (1ಕೋಟಿ 80 ಲಕ್ಷಕ್ಕೂ ಅಧಿಕ) ಮಿಲಿಯನ್ ಜನರು ಸಾವಪ್ಪಿದ್ದಾರೆ ಎಂದು ವರದಿ ಹೇಳಿದೆ. ಆದರೆ ಹಲವು ರಾಷ್ಟ್ರಗಳಲ್ಲಿ ಕೊರೋನಾದಿಂದಾದ ಮರಣಗಳನ್ನು ನಿಖರವಾಗಿ ಅಂದಾಜಿಸಲಾಗಲ್ಲ ಎಂದಿದೆ.
ಇತ್ತೀಚೇಗೆ ಲ್ಯಾನ್ಸೆಟ್​ ಎಂಬ ಜರ್ನಲ್​ ವಿಶ್ವದಲ್ಲಿ 18.2 ಮಿಲಿಯನ್​ ಜನರು ಕೊರೊನಾಗೆ ಬಲಿಯಾಗಿದ್ದರೆ, ಭಾರತದಲ್ಲಿ 41 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜು ವರದಿಯನ್ನು ನೀಡಿತ್ತು.
ಇತ್ತ 2020 ರ ಜನವರಿ 1 ರಿಂದ 2021 ಡಿಸೆಂಬರ್​ 31ರ ವರೆಗೂ ಪ್ರಪಂಚದಾದ್ಯಂತ 53 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!