44 ಲಕ್ಷ ರೂ. ನೀಡಿ ತಿರುಪತಿ ಭಕ್ತರಿಗೆ ಅನ್ನದಾನ ಮಾಡಿ, ಏನಿದು TTD ಹೊಸ ಯೋಜನೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ ತಿರುಮಲ ದೇಗುಲದಲ್ಲಿ ನೀವು ಕೂಡ ಒಂದು ದಿನದ ಅನ್ನದಾನ ಸೇವೆಯನ್ನು ಮಾಡಬಹುದು. ಈ ಅವಕಾಶವನ್ನು ಟಿಟಿಡಿ ಕಲ್ಪಿಸಿಕೊಟ್ಟಿದೆ.

ಒಂದು ಇಡೀ ದಿನದ ಸೇವೆಯಲ್ಲಿ ಬೆಳಗಿನ ಉಪಹಾರಕ್ಕೆ 10 ಲಕ್ಷ ರೂ, ಮಧ್ಯಾಹ್ನದ ಊಟಕ್ಕೆ 17 ಲಕ್ಷ ರೂ ಹಾಗೂ ಒಟ್ಟಾಗಿ ಮೂರು ಹೊತ್ತಿನ ಅನ್ನದಾನಕ್ಕೆ 44 ಲಕ್ಷ ರೂ ಪಾವತಿಸಬೇಕಿದೆ.

ಈ ಸೇವಿಗೆ ಪಾವತಿ ಮಾಡಿಸಿದರೆ ಅನ್ನದಾನ ದಿನ ದಾನಿಗಳೇ ಪ್ರಸಾದ ವಿತರಿಸಬಹುದು, ಅಲ್ಲದೆ ದಾನಿಗಳ ಹೆಸರನ್ನು ಅನ್ನಪ್ರಸಾದ ಸಂಕೀರ್ಣದಲ್ಲಿ ಪ್ರಕಟಿಸಲಾಗುವುದು ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!