Tuesday, July 5, 2022

Latest Posts

45 ಲಕ್ಷ ರೂ ವೆಚ್ಚದ ಕಸ ಸಂಸ್ಕರಣ ಘಟಕದ ಕಾಮಗಾರಿಗೆ ಶಾಸಕ ಎ.ಮಂಜು ಚಾಲನೆ

ರಾಮನಗರ: ಮಾಗಡಿ ಕಣ್ಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಗ್ಗನಹಳ್ಳಿ ಗ್ರಾಮದ ಎರಡು ಎಕರೆ ಜಾಗದಲ್ಲಿ ೪೫ ಲಕ್ಷ ರೂ ವೆಚ್ಚದ ಕಸ ಸಂಸ್ಕರಣ ಘಟಕದ ಕಾಮಗಾರಿಗೆ ಶಾಸಕ ಎ.ಮಂಜು ಚಾಲನೆ ನೀಡಿದರು.

ಶಾಸಕ ಎ.ಮಂಜು ಮಾತನಾಡಿ ಜಿಲ್ಲೆಯಲ್ಲಿ ಪ್ರಪಥಮವಾಗಿ ಸುಗ್ಗನಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಜಾಗದಲ್ಲಿ ೪೫ ಲಕ್ಷ ರೂ ವೆಚ್ಚದ ಕಸ ಸಂಸ್ಕರಣ ಘಟಕ ಸ್ಥಾಪಿಸಲಾಗುತ್ತಿದೆ. ಗ್ರಾಮಗಳಲ್ಲಿ ಸಂಗ್ರಹಿಸುವ ಕಸವನ್ನು ಸಂಸ್ಕರಣಾ ಘಟಕದಲ್ಲಿ ಕಸವನ್ನು ಗೊಬ್ಬರವನ್ನಾಗಿಸಿ ರೈತರಿಗೆ ಮಾರಾಟ ಮಾಡುವ ಕೆಲಸವನ್ನು ಗ್ರಾಮ ಪಂಚಾಯತಿಯವರು ಮಾಡುತ್ತಾರೆ, ಸಂಸ್ಕರಣ ಘಟಕದಲ್ಲಿ ಕಸವನ್ನು ರಸವನ್ನಾಗಿಸುವ ಕೆಲಸ ಮಾಡಲಾಗುತ್ತದೆ.

ವೀರಸಾಗರ ಭರ್ತಿಯಾಗಿರುವುದರಿಂದ ಕೆರೆಗೆ ಬಾಗಿನ ಸಮರ್ಪಿಸಲಾಗುತ್ತಿದೆ, ಕಳೆದ ವರ್ಷ ಕೆರೆಯ ಏರಿ ಒಡೆದು ರೈತರಿಗೆ ಬಹಳ ನಷ್ಟವಾಗಿದ್ದ ಕೆರೆಯನ್ನು ಗ್ರಾ.ಪಂನಿoದ ನರೇಗಾ ಯೋಜನೆಯಡಿ ೨೫ ಲಕ್ಷ ರೂ ವೆಚ್ಚದಲ್ಲಿ ಕೆರೆಯ ಏರಿಯನ್ನು ಈಗ ಅಭಿವೃದ್ದಿಗೊಳಿಸಲಾಗಿದೆ ಎಂದು ತಿಳಿಸಿದರು.

ತಾ.ಪಂ ಸದಸ್ಯ ಎಂ.ಜಿ ನರಸಿಂಹಮೂರ್ತಿ ಮಾತನಾಡಿ ಶಾಸಕ ಎ.ಮಂಜುರವರು ತಾಲ್ಲೂಕಿನ ಅಬಿವೃದ್ದಿ ಕೆಲಸಗಳಿಗೆ ಆದ್ಯತೆ ನೀಡಿ ಸುಗ್ಗನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ಮತ್ತು ಸಂಜೀವಿನಿ ಶೆಡ್ ನಿರ್ಮಾಣ, ವೀರಸಾಗರದಲ್ಲಿ ಶಾಲಾ ಕೊಠಡಿ, ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಹೊಸಹಳ್ಳಿಯಲ್ಲಿ ಶಾಲಾ ಕೊಠಡಿ ನಿರ್ಮಾಣ, ಚಿಕ್ಕಮಸ್ಕಲ್‌ನಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಹುಲಿಕಲ್‌ನಲ್ಲಿ ಸಿ.ಸಿ ರಸ್ತೆ, ಚರಂಡಿ ಮತ್ತು ಸಂಜೀವಿನಿ ಶೆಡ್ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಯೋಜನಾ ಪ್ರಾದಿಕಾರದ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ತಾ.ಪಂ ಇ.ಒ ಟಿ.ಪ್ರದೀಪ್, ಅಧ್ಯಕ್ಷ ನಾರಾಯಣಪ್ಪ, ಸದಸ್ಯ ಹನುಮೇಗೌಡ, ಕುದೂರು ಪುರುಷೋತ್ತಮ್, ಗ್ರಾ.ಪಂ ಮಾಜಿ ಅಧ್ಯಕ್ಷ ಬೋಜಣ್ಣ, ತಿಮ್ಮರಾಯಪ್ಪ, ಹುಲಿಕಲ್ ಪ್ರೇಮಣ್ಣ, ಕಿರಣ್, ಬೆಟ್ಟಹಳ್ಳಿ ಶ್ರೀನಿವಾಸ್, ಮಂಜುನಾಥ್, ಹೊಸಹಳ್ಳಿ ವಿನಯ್, ಸಾಬೀರ್ ಪಾಶ, ಕಾಗಿಮಡು ಚಂದ್ರಣ್ಣ, ಅಮೀದ್‌ಪಾಶ, ಪುಟ್ಟಣ್ಣ, ಜಯಶಂಕರ್, ಶ್ರೀಗಿರಿಪುರ ಪಿಡಿಒ ಬಸವರಾಜ್, ಕಣ್ಣೂರು ಪಿಡಿಒ ಪ್ರಭು ಮಹಾಲಿಂಗಸ್ವಾಮಿ ಮತ್ತು ಇನ್ನು ಮುಂತಾದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss