ಉತ್ಪಾದನೆ ಆಧರಿತ ಉತ್ತೇಜನದಡಿ 45,000 ಕೋಟಿ ರೂ. ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆತ್ಮನಿರ್ಭರ ಭಾರತವಾಗುವ ಕನಸಿನೊಂದಿಗೆ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಜಾರಿಗೆ ತರಲಾದ ಉತ್ಪಾದನೆ ಆಧರಿತ ಉತ್ತೇಜನ (PLI) ಯೋಜನೆಯಡಿ ಇದುವರೆಗೂ 45 ಸಾವಿರ ಕೋಟಿ ರೂಪಾಯಿಗಳ ಬಂಡವಾಳವನ್ನು ಆಕರ್ಷಿಸಲಾಗಿದೆ ಅಲ್ಲದೇ ಇದು 3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ನೀತಿ ಆಯೋಗದ ಸಿಇಒ ಪರಮೇಶ್ವರನ್ ಅಯ್ಯರ್ ಹೇಳಿದ್ದಾರೆ.

ಆಟೋಮೊಬೈಲ್ ಮತ್ತು ಆಟೋ ಘಟಕಗಳು, ವೈಟ್ ಗೂಡ್ಸ್, ಫಾರ್ಮಾ, ಜವಳಿ, ಆಹಾರ ಉತ್ಪನ್ನಗಳು, ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ಯೂಲ್‌ಗಳು, ಉಕ್ಕು ಸೇರಿದಂತೆ ಸುಮಾರು 14 ವಲಯಗಳಲ್ಲಿ ಸರ್ಕಾರವು ಉತ್ಪಾದನೆ ಆಧರಿತ ಉತ್ತೇಜನ ಯೋಜನೆಯನ್ನು ಜಾರಿಗೆ ತಂದಿದೆ.

“ಪಿಎಲ್‌ಐ ಕಾರ್ಯಕ್ರಮವು ಈಗಾಗಲೇ ಫಲಿತಾಂಶಗಳನ್ನು ತೋರಿಸಲು ಪ್ರಾರಂಭಿಸಿದೆ. ಸುಮಾರು 800 ಕೋಟಿ ರೂ.ಗಳನ್ನು ಈಗಾಗಲೇ ಪ್ರೋತ್ಸಾಹಕಗಳ ಮೂಲಕ ಪಾವತಿಸಲಾಗಿದೆ. ಮಾರ್ಚ್‌ಗೆ ಮೊದಲು 3,000 ಕೋಟಿ ರೂಪಾಯಿಯಿಂದ 4,000 ಕೋಟಿ ರೂಪಾಯಿಯಷ್ಟು ಪ್ರೋತ್ಸಾಹಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಯೋಜನೆಯು ದೇಶೀಯ ಉತ್ಪಾದನೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಮತ್ತು ಉತ್ಪಾದನೆಯಲ್ಲಿ ಜಾಗತಿಕ ಚಾಂಪಿಯನ್‌ಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದು ಇದು ಘನ ಫಲಿತಾಂಶಗಳನ್ನು ನೀಡುತ್ತಿದೆ. ಈಗಾಗಲೇ ಸುಮಾರು 45,000 ಕೋಟಿ ಹೂಡಿಕೆ ಬಂದಿದೆ, ಮೂರು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಮತ್ತು 2 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ ಈಗಾಗಲೇ ನಡೆಯುತ್ತಿದೆ” ಎಂದು ನೀತಿ ಆಯೋಗದ ಸಿಇಒ ಪರಮೇಶ್ವರನ್ ಅಯ್ಯರ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!