Thursday, August 11, 2022

Latest Posts

45,500 ವರ್ಷಗಳ ಹಿಂದಿನ ಗುಹೆ ಕಲಾಚಿತ್ರ ಪತ್ತೆ!! ಎಲ್ಲಿ ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂಡೋನೇಷ್ಯಾದ ಗುಹೆಯ ಮೇಲೆ ರಚಿಸಲಾದ ವಿಶ್ವದ ಅತ್ಯಂತ ಹಳೆಯ ವರ್ಣಚಿತ್ರವೊಂದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ.

ಇಂಡೊನೇಷ್ಯಾದ ದಕ್ಷಿಣ ಸುಲಾವೇಸಿ ಕಣಿವೆ ಪ್ರದೇಶದಲ್ಲಿರುವ ಗುಹೆಗಳಲ್ಲಿ ಈ ಚಿತ್ರಕಲೆ ಪತ್ತೆಯಾಗಿದ್ದು, ಇದರಲ್ಲಿ ಇಂಡೊನೇಷ್ಯಾ ದ್ವೀಪದ ಸ್ಥಳೀಯ ತಳಿ ‘ವಾರ್ಟಿ ಕಾಡು ಹಂದಿ’ಯನ್ನು ಹೋಲುವ ಚಿತ್ರವಿದು.

ಇದು ಸುಮಾರು 45,500 ವರ್ಷಗಳ ಹಿಂದೆ ರಚಿಸಿದ ಕಾಡು ಹಂದಿಯ ಚಿತ್ರವೆಂದು ಜರ್ನಲ್‌ ಸೈನ್ಸ್‌ ಅಂದಾಜಿಸಿದೆ.

2017ರ ವರೆಗೂ ಈ ಚಿತ್ರ ಪತ್ತೆಯಾಗಿರಲೇ ಇಲ್ಲ. ಅನಂತರದಿಂದ ಈ ಚಿತ್ರವು ಇಂಡೋನೇಷ್ಯಾದಲ್ಲಿ ಮಾನವ ಜೀವನಾರಂಭದ ಕುರಿತು ಕುತೂಹಲ ಸೃಷ್ಟಿಸಿದೆ. ಸುಲಾವೇಸಿ ಹಂದಿಗಳನ್ನು ಮನುಷ್ಯ ಸಹಸ್ರಾರು ವರ್ಷಗಳಿಂದ ಬೇಟೆಯಾಡುತ್ತಾ ಬಂದಿದ್ದಾನೆ. ಈ ಕಾರಣಕ್ಕಾಗಿಯೇ, ಗುಹೆಯಲ್ಲಿ ಈ ಚಿತ್ರವಿದೆ ಎಂದು ಪುರಾತತ್ವಜ್ಞರು ಮಾಹಿತಿ ನೀಡಿದ್ದಾರೆ.

‘ಸುಲಾವೆಸಿ ವಾರ್ಟಿ ಹಂದಿಯ ಚಿತ್ರ ವಿಶ್ವದ ಅತ್ಯಂತ ಪ್ರಾಚೀನ ಕಲಾಕೃತಿಯಾಗಿದೆ’ ಎಂದು ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಡಮ್ ಬ್ರೂಮ್  ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss