Sunday, August 14, 2022

Latest Posts

48 ಮರಿಗಳಿಗೆ ಜನ್ಮ ನೀಡಿದ ರಸಲ್ ವೈಫರ್‌ ಹಾವು

ಹುಬ್ಬಳ್ಳಿ: ತಲೆಗೆ ಪೆಟ್ಟು ಬಿದ್ದಿದ್ದ ಕೊಳಕ ಮಂಡಲ (ರಸಲ್ ವೈಫರ್‌) ಹಾವು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಅರಣ್ಯದಲ್ಲಿ ಬಿಡುವ ವೇಳೆ ಹಾವು 48 ಮರಿಗಳಿಗೆ ಜನ್ಮ ನೀಡಿದೆ.

ತಲೆಗೆ ಪೆಟ್ಟು ಬಿದ್ದ ಹಾವನ್ನು ಸ್ನೇಕ ಸಂಗಮೇಶ ರಕ್ಷಣೆ ಮಾಡಿದ್ದರು. ಎರಡು ದಿನ ಆರೈಕೆ ಮಾಡಿ ಅರಣ್ಯಕ್ಕೆ ಬಿಡಲು ತೆರಳಿದ್ದರು. ಆ ಸಂದರ್ಭದಲ್ಲಿ ಸುಮಾರು 48 ಮರಿಗಳಿಗೆ ಹಾವು ಜನ್ಮ ನೀಡಿದೆ.

ಎಲ್ಲ ಹಾವುಗಳಂತೆ ಕೊಳಕ ಮಂಡಲ ( ರಸಲ್ ವೈಫರ್‌ ) ಮೊಟ್ಟೆ ಹಾಕುವುದಿಲ್ಲ. ಗರ್ಭದಲ್ಲಿ ಮೊಟ್ಟೆಗಳಿಗೆ ಕಾವು ಕೊಟ್ಟು ಅಲ್ಲಿಯೇ ಮರಿಗಳನ್ನು ತೆಗೆದು ಜನ್ಮ ನೀಡುತ್ತದೆ ಎನ್ನುತ್ತಾರೆ ಸ್ನೇಕ್ ಸಂಗಮೇಶ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss