Friday, June 9, 2023

Latest Posts

ರಾಜ್ಯ ರಾಜಧಾನಿಯಲ್ಲಿ ಹೆಚ್ಚಾಗಿದ್ದಾರೆ ಶೇ.49ರಷ್ಟು ಯುವ ಮತದಾರರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಮತದಾನ ಮಾಡುವ ಯುವ ಮತದಾರರು ಹೆಚ್ಚಾಗಿದ್ದಾರೆ.
ಚುನಾವಣಾ ಆಯೋಗ ಯುವ ಪೀಳಿಗೆಯನ್ನು ಚುನಾವಣೆಯತ್ತ ಸೆಳೆಯಲು, ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಪ್ರೇರೇಪಿಸಲು ಸಾಕಷ್ಟು ಪ್ರಯತ್ನ ಪಟ್ಟಿದೆ.

ಇದರ ಫಲವಾಗಿ ಬೆಂಗಳೂರಿನಲ್ಲಿ ಶೇ.49ರಷ್ಟು ಯುವ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ 54 ಸಾವಿರ ಮಂದಿ ಯುವ ಮತದಾರರಿದ್ದರು. ಇದೀಗ ಈ ಸಂಖ್ಯೆ 1.1ಲಕ್ಷಕ್ಕೆ ಏರಿಕೆಯಾಗಿದೆ. ಈ ಬಾರಿ ತೃತೀಯಲಿಂಗಿಗಳು ಮತದಾನ ಮಾಡಲು ಮುಂದೆ ಬಂದಿದ್ದಾರೆ. ಈ ಹಿಂದೆ 16,000 ಮತದಾರರಷ್ಟೇ ಇದ್ದು, ಇದೀಗ 30,000 ಸಾವಿರ ಮತದಾರರಾಗಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಕೈಗಾರಿಕೆಗಳು, ಕಾಲೇಜುಗಳು, ಬ್ಯಾಂಕ್ ಆವರಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!