ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಸರ್ಕಾರದ ವತಿಯಿಂದ 2 ದಿನಗಳ ಕಾಲ ನಡೆದ 4ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ.
ದೇಶದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಬರೋಬ್ಬರಿ 57.122 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿದ್ದು ಅತಿದೊಡ್ಡ ಖರೀದಿದಾರನಾಗಿದೆ. ದೊಡ್ಡ ಸ್ಪೆಕ್ಟ್ರಮ್ ಹರಾಜಿನಲ್ಲಿ ದೊಡ್ಡ ಮೊತ್ತದ ರೇಡಿ ವೇವ್ ಗಳನ್ನು ಜಿಯೋ 4ಜಿ ಪಡೆದುಕೊಂಡಿರುವುದಾಗಿ ಟೆಲಿಕಾಂ ಸಚಿವಾಲಯ ತಿಳಿಸಿದೆ.
ಇನ್ನು ಭಾರ್ತಿ ಏರ್ಟೆಲ್ 18,699 ಕೋಟಿ ರೂಪಾಯಿ ಮೌಲ್ಯದ ರೇಡಿಯೋ ವೇವ್ ಗಳನ್ನು ಪಡೆದುಕೊಂಡಿದೆ. 1993.40 ಕೋಟಿ ರೂಪಾಯಿ ಮೌಲ್ಯದ ಸ್ಪೆಕ್ಟ್ರಮ್ ಖರೀದಿಸಿದೆ ಎಂದು ಟೆಲಿಕಾಂ ಸಚಿವಾಲಯ ಮಾಹಿತಿ ನೀಡಿದೆ.
ಟೆಲಿಕಾಂ ಇಲಾಖೆ ಕಾರ್ಯದರ್ಶಿ ಅಂಶು ಪ್ರಕಾಶ್ ಮಾಹಿತಿ ನೀಡಿ, ಒಟ್ಟು 77,814 ಕೋಟಿ ರೂಪಾಯಿ ಮೌಲ್ಯದ ಸ್ಪೆಕ್ಟ್ರಮ್ ಹರಾಜಾಗಿದೆ ಎಂದು ಹೇಳಿದ್ದಾರೆ.