ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು 4ನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ಸಜ್ಜಾಗಿದೆ.
9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಆಂಧ್ರ ಪ್ರದೇಶದ 25, ತೆಲಂಗಾಣದ 17, ಉತ್ತರಪ್ರದೇಶದ 13, ಮಹಾರಾಷ್ಟ್ರದ 11, ಬಂಗಾಳದ 8, ಬಿಹಾರದ 5, ಒಡಿಶಾ, ಜಾರ್ಖಂಡ್‌ನ ತಲಾ 4 ಹಾಗೂ ಜಮ್ಮು ಮತ್ತು ಕಾಶ್ಮೀರದ 1 ಸ್ಥಾನಕ್ಕೆ ಮತದಾನ ನಡೆಯಲಿದ್ದು, 1717 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಪ್ರಮುಖ ಅಭ್ಯರ್ಥಿಗಳು ಯಾರು?
ಅಖಿಲೇಶ್ ಯಾದವ್ – ಉತ್ತರ ಪ್ರದೇಶದ ಕನೌಜ್ ಕ್ಷೇತ್ರ.
ಮಹುವಾ ಮೊಯಿತ್ರಾ – ಪಶ್ಚಿಮ ಬಂಗಾಳದ ಕೃಷ್ಣನಗರ.
ಅಧೀರ್ ರಂಜನ್ ಚೌಧರಿ – ಬಹರಂಪುರ್, ಪಶ್ಚಿಮ ಬಂಗಾಳ.
ಗಿರಿರಾಜ್ ಸಿಂಗ್ – ಬಿಹಾರದ ಬೇಗುಸರಾಯ್.
ವೈಎಸ್ ಶರ್ಮಿಳಾ – ಆಂಧ್ರಪ್ರದೇಶದ ಕಡಪ.
ಅರ್ಜುನ್ ಮುಂಡಾ – ಜಾರ್ಖಂಡ್‌ನ ಖುಂಟಿ ಕ್ಷೇತ್ರ.
ಶತ್ರುಘ್ನ ಸಿನ್ಹಾ – ಪಶ್ಚಿಮ ಬಂಗಾಳದ ಅಸನ್ಸೋಲ್.
ಅಸಾದುದ್ದೀನ್ ಓವೈಸಿ – ತೆಲಂಗಾಣದ ಹೈದರಾಬಾದ್