ಹೊಸದಿಗಂತ ವರದಿ, ಶಿರಸಿ:
೫ ಕೋಟಿ ರೂ. ಬೆಲೆ ಬಾಳುವ ನಿಷೇಧಿತ ಅಂಬರ್ ಗ್ರೀಸನ್ನು ( ತಿಮಿಂಗಲು ವಾಂತಿ ) ಶಿರಸಿ ಪೊಲೀಸರು ಸೋಮವಾರ ಮಧ್ಯರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಪ್ರಕರಣ ಇದಾಗಿದೆ. ಬೆಳಗಾವಿಯಿಂದ ತಂದು ಶಿರಸಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಶಿರಸಿ ನಗರದ ಮರಾಠಿಕೊಪ್ಪದಲ್ಲಿ ಸುಮಾರು ೫ ಕೆಜಿ ತಿಮಿಂಗಲು ವಾಂತಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಸಂತೋಷ್ ಕಾಮತ್ ಮತ್ತು ಶಿರಸಿಯ ರಾಜೇಶ್ ಪೂಜಾರಿಯನ್ನು ಘಟನೆಯಲ್ಲಿ ಬಂಧಿಸಲಾಗಿದೆ. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.